Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಪಾದರಾಯನಪುರ ಗಲಾಟೆ ಪ್ರಕರಣ: ಎಲ್ಲ 126 ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು

ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ಪಾದರಾಯಣಪುರದ ಕೊರೋನಾ ವಾರಿಯರ್ಸ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಎಲ್ಲ 126 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.

ಪಾದರಾಯನಪುರದಲ್ಲಿ ಪೊಲೀಸರು, ವೈದ್ಯಕೀಯ ಸಿಬ್ಬಂದಿಗಳು ಮತ್ತು ಆಶಾಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 126 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ದೊರೆತಿದೆ. ಹೈಕೋರ್ಟ್‌ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ಪೀಠವು ಷರತ್ತುಬದ್ಧ  ಜಾಮೀನು ನೀಡಿ ಆದೇಶಿಸಿದೆ.

ಜಾಮೀನು ನೀಡುವ ಸಂದರ್ಭ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿದ್ದು, ಆರೋಪಿಗಳು 1 ಲಕ್ಷ ರೂಪಾಯಿ ಶ್ಯೂರಿಟಿ ಬಾಂಡ್‌ ನೀಡಬೇಕು. ಎಲ್ಲರೂ ಕೊರೋನಾ ಟೆಸ್ಟ್‌ ಮಾಡಿಸಿಕೊಳ್ಳಬೇಕು. ಕೊರೋನಾ ಮಾರ್ಗಸೂಚಿ ಪಾಲಿಸಬೇಕು. ಇಲ್ಲವಾದಲ್ಲಿ ಜಾಮೀನು ರದ್ದು  ಮಾಡಲಾಗುವುದು ಎಂಬ ಷರತ್ತುಗಳನ್ನು ವಿಧಿಸಿದೆ. ಅಲ್ಲದೆ ಪ್ರಕರಣದ ಆರೋಪಿಗಳಿಗೆ ಕೊರೋನಾ ಪಾಸಿಟಿವ್‌ ಇದ್ದರೆ, ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಪಾದರಾಯನಪುರದಲ್ಲಿ ಮತ್ತೆ ಗಲಾಟೆ
ಪಾದರಾಯನಪುರದಲ್ಲಿ ಸ್ಥಳೀಯರು ಸೀಲ್‌ಡೌನ್‌ ತೆರವುಗೊಳಿಸಲು ಮತ್ತೆ ಗಲಾಟೆ ಆರಂಭಿಸಿದ್ದಾರೆ. ಅಧಿಕಾರಿಗಳು ಪಾದರಾಯನಪುರದ ಒಂದು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಈ ಬೆನ್ನಲ್ಲೇ ಮತ್ತೊಂದು ರಸ್ತೆಯನ್ನೂ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು  ಮಹಿಳೆಯರೂ ಸೇರಿದಂತೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಗಲಾಟೆ ಆರಂಭಿಸಿದ್ದಾರೆ.

No Comments

Leave A Comment