Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

ಬರ್ತ್ ಡೇ ಪಾರ್ಟಿ ತಂದ ಕುತ್ತು; ಇಂದೋರ್ ನಲ್ಲಿ 19 ಮಂದಿಯಲ್ಲಿ ಕೊರೋನಾ ಪಾಸಿಟಿವ್, ಮಹಿಳೆ ಬಲಿ

ಇಂದೋರ್: ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಮಾಡುವ ಎಡವಟ್ಟುಗಳಿಗೆ ಈ ಒಂದು ಘಟನೆ ಸ್ಪಷ್ಟ ನಿದರ್ಶನವಾಗಿದೆ. ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡ ಪರಿಣಾಮ ಇಂದೋರ್ ನಲ್ಲಿ 19 ಮಂದಿಯಲ್ಲಿ ಕೊರೋನಾ ದೃಢಪಟ್ಟಿದ್ದು, ಮಹಿಳೆಯೋರ್ವರು ಬಲಿಯಾಗಿದ್ದಾರೆ.

10 ದಿನಗಳ ಹಿಂದೆ ಬಡೋದಿಯಾ ಖಾನ್ ಗ್ರಾಮದಲ್ಲಿ 2 ಮಗುವಿನ ಬರ್ತ್ ಡೇ ಪಾರ್ಟಿ ನಡೆಸಲಾಗಿದ್ದು, ಪಾರ್ಟಿಯಲ್ಲಿ ಹಲವು ಪಾಲ್ಗೊಂಡಿದ್ದಾರೆ.

ಮೃತಪಟ್ಟಿರುವ ಮಹಿಳೆಯಲ್ಲಿ ಅದಾಗಲೇ ಆರೋಗ್ಯ ಸಮಸ್ಯೆಯಿದ್ದು, ಹೀಗಿದ್ದರೂ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದು. ಆರೋಗ್ಯ ಸ್ಥಿತಿ ಕೆಟ್ಟದಾಗಿದ್ದರೂ ಆಕೆಯ ಕುಟುಂಬಸ್ಥರು ಇಂದೋರ್’ಗೆ 15 ದಿನಗಳ ಹಿಂದೆಯೇ ಕರೆತಂದಿದ್ದಾರೆ. ಬಳಿಕ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಮೇ.18ರಂದು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆಯಲ್ಲಿ ಕೊರೋನಾ ಇರುವುದು ದೃಢುಪಟ್ಟಿದೆ. ಮೇ.22 ರಂದು ಮಹಿಳೆ ಸಾವನ್ನಪ್ಪಿದ್ದಾರೆಂದು ವೈದ್ಯಕೀಯ ಅಧಿಕಾರಿ ಹೇಮಂತ್ ರಘುವಂಶಿಯವರು ಹೇಳಿದ್ದಾರೆ.

ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಜನರನ್ನು ಹುಡುಕಾಟುವ ಕಾರ್ಯ ಆರಂಭವಾದ ವೇಳೆ ಬರ್ತ್ ಡೇ ಪಾರ್ಟಿ ನಡೆದಿರುವ ವಿಚಾರ ಬಹಿರಂಗಗೊಂಡಿತ್ತು. ಲಾಕ್’ಡೌನ್ ನಡುವಲ್ಲೇ ಈ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೃತಪಟ್ಟಿರುವ ಮಹಿಳೆ ಕೂಡ ಪಾರ್ಟಿಯಲಾಲಿ ಭಾಗಿಯಾಗಿದ್ದರು. ಇದೀಗ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 19 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ. 2000 ಜನಸಂಖ್ಯೆಯನ್ನು ಹೊಂದಿರುವ ಬಡೋದಿಯಾ ಗ್ರಾಮವನ್ನು ಇದೀಗ ಸೀಲ್ ಡೌನ್ ಮಾಡಲಾಗಿದ್ದು, ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದೀಗ ಕಾರ್ಯಕ್ರಮ ಆಯೋಜಿಸಿದ್ದಮೂವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಕಾರ್ಯಕ್ರಮ ಆಯೋಜಿಸಿದ್ದ ಮೂವರಲ್ಲೂ ಕೊರೋನಾ ದೃಢಪಟ್ಟಿದ್ದು, ಇಂದೋರ್ ನಲ್ಲಿರುವ ಕೊರೋನಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದೋರ್ ಜಿಲ್ಲೆಯ ಗಡಿಯಲ್ಲೂ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದಿದ್ದಾರೆ.

No Comments

Leave A Comment