Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಉಭಯ ಗಾನ ವಿಶಾರದೆ, ಸಂಗೀತ ವಿದುಷಿ ಡಾ. ಶ್ಯಾಮಲಾ ಜಿ ಭಾವೆ ವಿಧಿವಶ

ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಗಾಯಕಿ, ಸಂಗೀತಗಾರ್ತಿ ಡಾ. ಶ್ಯಾಮಲಾ ಜಿ ಭಾವೆ ನಿಧನರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಶ್ಯಾಮಲಾ ಅವರು ಕೊನೆಯುಸಿರೆಳೆದಿದ್ದಾರೆ.

ಶೇಷಾದ್ರಿಪುರಂನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದರು.

ಕರ್ನಾಟಿಕ್ ಹಾಗೂ ಹಿಂದೂಸ್ತಾನಿ ಎರಡು ಪ್ರಕಾರಗಳಲ್ಲೂ ಗಾಯನ ಮಾಡಿ ಸೈ ಎನಿಸಿಕೊಂಡು ಉಭಯ ಗಾನ ವಿಶಾರದೆ ಎಂಬ ಬಿರುದುಗಳಿಸಿದ್ದರು. ಇದಲ್ಲದೆ, ಸುಗುಮ ಸಂಗೀತ, ಭಜನೆ, ಸಂಗೀತ ಸಂಯೋಜನೆಯಲ್ಲೂ ಪರಿಣತಿ ಪಡೆದಿದ್ದರು.

ಬೆಂಗಳೂರಿನಲ್ಲಿ 1941 ರ ಮಾರ್ಚ್ 14ರಂದು ಜನಿಸಿದ ಶ್ಯಾಮಲಾ ಅವರಿಗೆ ತಂದೆ ಆಚಾರ್ಯ ಪಂಡಿತ್ ಗೋವಿಂದ್ ವಿಠಲ್ ಭಾವೆ, ವಿದುಷಿ ಲಕ್ಷ್ಮಿ ಜಿ ಭಾವೆ ಅವರೇ ಪ್ರಥಮ ಸಂಗೀತ ಗುರುಗಳು. ಹೀಗಾಗಿ 6ನೇ ವಯಸ್ಸಿನಲ್ಲೇ ಶ್ಯಾಮಲಾ ಅವರು ಗಾಯಕಿಯಾಗಿ ಗುರುತಿಸಿಕೊಂಡರು. 12ನೇ ವಯಸ್ಸಿಗೆ ಸಾರ್ವಜನಿಕ ಸಂಗೀತ ಕಛೇರಿ ನೀಡಿದರು.

1953ರಲ್ಲಿ ತಂದೆ ಸ್ಥಾಪಿಸಿದ ಶಾಲೆಯನ್ನು ಶ್ಯಾಮಲಾ ನೋಡಿಕೊಳ್ಳತೊಡಗಿದರು. ಶ್ಯಾಮಲಾ ಅವರು ವಿವಿಧ ದೇಶಗಳಲ್ಲಿ ಸಂಗೀತ ಕಛೇರಿ ನೀಡಿ ಭಾರತೀಯ ಸಂಗೀತಕ್ಕೆ ರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದ್ದಾರೆ.

No Comments

Leave A Comment