ಮೂಡುಬಿದಿರೆ : ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
ಮೂಡುಬಿದಿರೆ :ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಡಂದಲೆ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿ ಕಡಂದಲೆ ನಿವಾಸಿಯಾಗಿದ್ದು ಮುಂಬೈಯಲ್ಲಿ ಹೋಟೆಲ್ ಕೆಲಸದಲ್ಲಿದ್ದರು ಎಂದು ತಿಳಿದುಬಂದಿದೆ ಬುಧವಾರ ರಾತ್ರಿ ಇಬ್ಬರು ಸಹೋದರರ ಜೊತೆಗೆ ಮೂಡುಬಿದಿರೆಗೆ ಬಂದಿದ್ದರು. ಊರಿಗೆ ಬಂದವರನ್ನು ತಡರಾತ್ರಿ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಮುಂಜಾನೆ 3 ಗಂಟೆಯ ಹೊತ್ತಿಗೆ ಶಾಲೆಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೃತದೇಹವನ್ನು ಕೋವಿಡ್ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಈ ಶಾಲೆಯಲ್ಲಿ ಕ್ವಾರಂಟೈನ್ನ ನಲ್ಲಿ ಇನ್ನೂ ಹಲವರಿದ್ದು, ಅವರನ್ನು ಬೇರೆ ಕಡೆ ಸ್ಥಳಾಂತರಿಸಲಾಗುವುದು ಎಂದು ವರದಿಯಾಗಿದೆ.
ಸ್ಥಳಕ್ಕೆ ಉಪವಿಭಾಗಧಿಕಾರಿ ಮದನ ಮೋಹನ್ ಸಿ ಭೇಟಿ ನೀಡಿದ್ದಾರೆ. ಮೃತರು ಪತ್ನಿ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.