Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಕರ್ನಾಟಕಕ್ಕೆ ಕೊರೋನಾಘಾತ: ಒಂದೇ ದಿನ ದಾಖಲೆ 127 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆ

ಬೆಂಗಳೂರು: ಸಕ್ಕರೆ ನಾಡು ಮಂಡ್ಯಕ್ಕೆ ಮಹಾ ಕಂಟಕ ಎದುರಾಗಿದ್ದು ಬರೋಬ್ಬರಿ 62 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ದಾಖಲೆ 127 ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆಯಾಗಿದೆ.

ಮಂಡ್ಯದಲ್ಲಿ ಇಂದು ಒಂದೇ ದಿನ 62 ಮಂದಿಗೆ ಸೋಂಕು ತಗುಲಿದೆ. ಇನ್ನು ದಾವಣಗೆರೆಯಲ್ಲಿ 19, ಶಿವಮೊಗ್ಗ 12, ಕಲಬುರಗಿ 11, ಬೆಂಗಳೂರು 6, ಉಡುಪಿ 4, ಉತ್ತರ ಕನ್ನಡ 4, ಹಾಸನ 3, ಚಿಕ್ಕಮಗಳೂರು 2, ಗದಗ, ಯಾದಗಿರಿ, ವಿಜಯಪುರ ಮತ್ತು ಚಿತ್ರದುರ್ಗ 1 ಪ್ರಕರಣ ಸೇರಿದಂತೆ ರಾಜ್ಯದಲ್ಲಿ 127 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಈ ನಡುವೆ, ರಾಜ್ಯದಲ್ಲಿ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಬಳ್ಳಾರಿಯ 61 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇವರು ಜ್ವರದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚಿಗೆ ಹೃದಯ ಶಸ್ತ್ರ ಚಿಕಿತ್ಸೆಗೂ ಒಳಪಟ್ಟಿದ್ದರು. ವಿಜಯಪುರದ 65 ವರ್ಷ ವೃದ್ಧರೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇವರನ್ನು ಸೋಮವಾರ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನ 54 ವರ್ಷದ ನಿವಾಸಿ ಸೋಮವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದರಿಂದ ಸೋಂಕಿತರ ಸಂಖ್ಯೆ 40ಕ್ಕೇರಿಕೆಯಾಗಿದೆ.

1373 ಪ್ರಕರಣಗಳ ಪೈಕಿ 530 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 802 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ ರಾಜ್ಯದಲ್ಲಿ ಒಟ್ಟಾರೆ 40 ಮಂದಿ ಬಲಿಯಾಗಿದ್ದಾರೆ. ಇನ್ನು ರಾಜ್ಯದಲ್ಲಿ ಪತ್ತೆಯಾಗಿರುವ 127 ಪ್ರಕರಣಗಳ ಪೈಕಿ 91 ಪ್ರಕರಣಗಳಿಗೆ ಮಹಾರಾಷ್ಟ್ರದ ಮುಂಬೈ ನಂಟಿದೆ.

No Comments

Leave A Comment