Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಕಟಪಾಡಿಯಲ್ಲಿ ಸಿಡಿಲಿನ ಆರ್ಭಟಕ್ಕೆ ಯುವಕ‌ ಬಲಿ

ಕಾಪು : ರವಿವಾರ ರಾತ್ರಿ ಆರ್ಭಟಿಸಿದ ಭಾರೀ ಗುಡುಗು – ಸಿಡಿಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ಕಟಪಾಡಿಯಲ್ಲಿ ನಡೆದಿದೆ.

ಕಟಪಾಡಿ ಪಡುಏಣಗುಡ್ಡೆ ನಿವಾಸಿ ಸುರೇಶ್ ಎಂಬವರ ಪುತ್ರ ಭರತ್ (24) ಮೃತ ಯುವಕ.

ರವಿವಾರ ರಾತ್ರಿ ಮನೆಯೊಳಗೆ ಇದ್ದ ಈತ ಮನೆಯವರೊಂದಿಗೆ ಮಾತನಾಡುತ್ತಿದ್ದಾಗಲೇ ಘಟನೆ ಸಂಭವಿಸಿದ್ದು, ತತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ.

ಕಾಪು ಎಸ್.ಐ ರಾಜಶೇಖರ ಸಾಗನೂರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

No Comments

Leave A Comment