Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ರಾಜ್ಯಕ್ಕೆ ಕೊರೋನಾಘಾತ: 24 ಗಂಟೆಗಳಲ್ಲಿ 84 ಮಂದಿಯಲ್ಲಿ ವೈರಸ್ ದೃಢ, ಸೋಂಕಿತರ ಸಂಖ್ಯೆ 1231ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಸೋಮವಾರ ಬರೋಬ್ಬರಿ 84 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1231ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಾಹಿತಿ ನೀಡಿದೆ.

ಇದು ಇಲ್ಲಿಯವರೆಗೆ ರಾಜ್ಯದಲ್ಲಿ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣವಾಗಿದೆ. ಮಂಡ್ಯದಲ್ಲಿ 17 ಹಾಗೂ ಬೆಂಗಳೂರು ನಗರದಲ್ಲಿ 19 ಪ್ರಕರಣಗಳು ವರದಿಯಾಗಿವೆ.

ಹಾಸನದಲ್ಲಿ 4, ರಾಯಚೂರಿನಲ್ಲಿ 6, ಬೆಂಗಳೂರು ನಗರದಲ್ಲಿ 19, ಕೊಪ್ಪಳದಲ್ಲಿ 3, ವಿಜಯಪುರದಲ್ಲಿ 5, ಗದಗದಲ್ಲಿ 5, ಬಳ್ಳಾರಿಯಲ್ಲಿ 1, ದಾವಣಗೆರೆಯಲ್ಲಿ 1, ಯಾದಗಿರಿಯಲ್ಲಿ 5, ಬೀದರ್ ನಲ್ಲಿ 1, ಕಲಬುರಗಿಯಲ್ಲಿ 6, ಉತ್ತರ ಕನ್ನಡದಲ್ಲಿ 8, ಮಂಡ್ಯದಲ್ಲಿ 17, ಕೊಡಗಿನಲ್ಲಿ 1,ಬೆಳಗಾವಿಯಲ್ಲಿ 2 ಪ್ರಕರಣಗಳು ವರದಿಯಾಗಿವೆ.

ಉತ್ತರಕನ್ನಡದ 2 ವರ್ಷದ ಮಗು ಹಾಗೂ ಮಂಡ್ಯದ 3 ವರ್ಷದ ಹೆಣ್ಣು ಮಗುವಲ್ಲಿ ಕೂಡ ಸೋಂಕು ದೃಢಪಟ್ಟಿದೆ. ಇದರಲ್ಲಿ ಮುಂಬೈನಿಂದ ಆಗಮಿಸಿದ ಬಹುತೇಕ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ.

No Comments

Leave A Comment