Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಅಮೆರಿಕಾದಲ್ಲಿ ಮುಂದುವರೆದ ಕೊರೋನಾ ಆರ್ಭಟ: 24 ಗಂಟೆಗಳಲ್ಲಿ 1,754 ಮಂದಿ ಬಲಿ

ವಾಷಿಂಗ್ಟನ್: ಅಮೆರಿಕಾದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕೇವಲ 24 ಗಂಟೆಗಳಲ್ಲಿ 1,754 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಒಂದೇ ದಿನ 1,754 ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಮಹಾಮಾರಿಗೆ ಈ ವರೆಗೂ ಒಟ್ಟು 85,813 ಮಂದಿ ಬಲಿಯಾಗಿದ್ದಾರೆಂದು ಜಾನ್ ಹಾಪ್ಕಿನ್ಸ್ ಮಾಹಿತಿ ನೀಡಿದೆ.

ಈ ನಡುವೆ ಗುರುವಾರ ಒಂದೇ ದಿನ 5ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 14 ಲಕ್ಷಕ್ಕೆ ಏರಿಕೆಯಾಗಿದೆ.

No Comments

Leave A Comment