Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಭಾರತ ಜೊತೆ ಸೇರಿ ಚೀನಾಗೆ ತಿರುಗೇಟು ನೀಡಲು ಅಮೆರಿಕಾ ಮಾಸ್ಟರ್ ಪ್ಲಾನ್: 18 ಅಸ್ತ್ರಗಳ ಪ್ರಯೋಗಕ್ಕೆ ಸಿದ್ಧತೆ

ವಾಷಿಂಗ್ಟನ್: ಜಗತ್ತಿನಾದ್ಯಂತ ತಲ್ಲಣದ ತರಂಗ ಸೃಷ್ಟಿಸಿರುವ ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದ ವಿಚಾರವಾಗಿ ನಿರಂತರವಾಗಿ ಸುಳ್ಳು, ವಂಚನೆ, ಮಾಹಿತಿ ಮುಚ್ಚಿಡುತ್ತಿರುವ ಚೀನಾಗೆ ತಿರುಗೇಟು ನೀಡಲು ಮುಂದಾಗಿರುವ ಅಮೆರಿಕಾ, ಭಾರತದೊಂದಿಗೆ ಮಿಲಿಟರಿ ಒಪ್ಪಂದ ಸೇರಿದಂತೆ 18 ಅಂಶಗಳೊಂದಿಗೆ ರಣವ್ಯೂಹ ರೂಪಿಸುತ್ತಿರುವ ಸಂಗತಿಯನ್ನು ಅಮೆರಿಕಾದ ಉನ್ನತ ಮಟ್ಟದ ಸೆನೆಟರ್ ಒಬ್ಬರು ಬಹಿರಂಗಪಡಿಸಿದ್ದಾರೆ.

ಚೀನಾ ತಯಾರಿಕೆ ವಸ್ತುಗಳನ್ನು ದೂರವಿಡುವುದು ಮತ್ತು ಭಾರತ, ವಿಯೆಟ್ನಾಂ, ತೈವಾನ್ ನೊಂದಿಗೆ ಆಳವಾದ ಮಿಲಿಟರಿ ಕಾರ್ಯತಂತ್ರದ ಒಪ್ಪಂದ ಮಾಡಿಕೊಳ್ಳುವ ಪ್ರಮುಖ ಸಲಹೆಗಳನ್ನು  ಅಮೆರಿಕಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಅಮೆರಿಕಾದ ಅಸಂಖ್ಯಾತ ಜನರ ಸಾವಿಗೆ ಕಾರಣವಾಗಿರುವ ಜಾಗತಿಕ ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಚೀನಾ ಸರ್ಕಾರ ದುರುದ್ದೇಶದಿಂದ ಮಾಹಿತಿ ಮುಚ್ಚಿಡುತ್ತಿದೆ.ಕಾರ್ಮಿಕ ಶಿಬಿರಗಳಲ್ಲಿ ತನ್ನದೇ  ದೇಶದ ನಾಗರಿಕನ್ನು ಕೂಡಿಹಾಕುತ್ತಿದೆ ಅಮೆರಿಕಾದ ತಂತ್ರಜ್ಞಾನ ಮತ್ತು ಉದ್ಯೋಗಗಳನ್ನು ಕದಿಯಲಾಗುತ್ತಿದೆ. ನಮ್ಮ ಮಿತ್ರ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕಲಾಗುತ್ತಿದೆ ಎಂದು ಸೆನೆಟರ್ ಥಾಮ್ ಟಿಲ್ಲಿಸ್ ಹೇಳಿದ್ದಾರೆ.

ಇದು ಅಮೆರಿಕಾ ಮತ್ತಿತರ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಕೋವಿಡ್-19 ಬಗ್ಗೆ ಸುಳ್ಳು ಹೇಳುತ್ತಿರುವ ಚೀನಾವನ್ನು ಹೊಣೆಗಾರರನ್ನಾಗಿ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಅಮೆರಿಕಾದ ಆರ್ಥಿಕತೆ, ಸಾರ್ವಜನಿಕ ಆರೋಗ್ಯ ಮತ್ತು ರಾಷ್ಟ್ರದ ಭದ್ರತೆ ಕಾಪಾಡಿಕೊಳ್ಳುವಂತೆ ಚೀನಾ ಸರ್ಕಾರಕ್ಕೆ ತಕ್ಕ ಬುದ್ದಿ ಕಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಿತ್ರ ರಾಷ್ಟ್ರಗಳು ಹಾಗೂ ಭಾರತ, ತೈವಾನ್ ಮತ್ತು ವಿಯೆಟ್ನಾಂ ರಾಷ್ಟ್ರಗಳಿಗೆ  ರಕ್ಷಣಾ ಉಪಕರಣಗಳನ್ನು ಮಾರಾಟ ಮಾಡುವ ಮೂಲಕ ಸುಭದ್ರ ರಕ್ಷಣಾ ಒಪ್ಪಂದ ಮಾಡಿಕೊಳ್ಳುವುದಕ್ಕೆ ಕರೆ ನೀಡಿರುವ ಅಮೆರಿಕಾ, ಮಿಲಿಟರಿ ಪಡೆಯನ್ನು ಬಲಿಷ್ಟಪಡಿಸುವಂತೆ ಜಪಾನ್ ನ್ನು ಪ್ರೋತ್ಸಾಹಿಸಿದ್ದು, ಆಕ್ರಮಣಕಾರಿ ಮಿಲಟರಿ ಸಲಕರಣೆಗಳನ್ನು ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಮಾರಾಟ ಮಾಡುವುದಾಗಿ ಹೇಳಿದೆ.

ಚೀನಾದಿಂದ ತಯಾರಿಕೆ ವಸ್ತುಗಳಿಂದ ದೂರ ಉಳಿಯಲು ಬಯಸಿರುವ ಅಮೆರಿಕಾ, ತಂತ್ರಜ್ಞಾನ ಕದಿಯುವ ಚೀನಾದ ಹ್ಯಾಕರ್ ಗಳ ವಿರುದ್ಧ ಬಲಿಷ್ಠ ಸೈಬರ್ ಸೆಕ್ಯುರಿಟಿ ರಚಿಸಲು ಯೋಜಿಸಿದೆ.

ಚೀನಾ ಸರ್ಕಾರ ಸಾಲ ನೀಡಲು ಬಳಸುತ್ತಿರುವ ಅಮೆರಿಕಾ ತೆರಿಗೆದಾರರ ಹಣವನ್ನು ತಡೆಯುವಂತೆ ಹಾಗೂ ಚೀನಾ ತಂತ್ರಜ್ಞಾನ ಕಂಪನಿ ಹುವಾವೇ ಬ್ಯಾನ್ ಮಾಡುತ್ತಿದ್ದು, ಇದೇ ರೀತಿಯ ನಿರ್ಬಂಧವನ್ನು ಅನುಷ್ಠಾನಗೊಳಿಸಲು ಇತರ ಮೈತ್ರಿ ರಾಷ್ಟ್ರಗಳೊಂದಿಗೆ ಸಮನ್ವಯತೆ ಸಾಧಿಸಲಾಗುತ್ತಿದೆ ಎಂದು ಹೇಳಲಾಗಿದೆ.

 2022ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಬೀಜಿಂಗ್ ನಿಂದ ಹಿಂದಕ್ಕೆ ಪಡೆಯಬೇಕು ಎಂದು ಸೆನೆಟರ್ ಟಿಲ್ಲಿಸ್ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಒತ್ತಾಯಿಸಿದ್ದಾರೆ.

No Comments

Leave A Comment