Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಯುವ ನಿರ್ಮಾಪಕರ ಜೊತೆಗೆ ಮೂರು ಭಾಷೆಗಳಲ್ಲಿ ಚಿತ್ರ ಮಾಡುತ್ತೇನೆ: ಪಾರುಲ್ ಯಾದವ್

ಪವನ್ ಒಡೆಯರ್ ನಿರ್ದೇಶನದ ಗೋವಿಂದಾಯ ನಮಃ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ಪಾರುಲ್ ಯಾದವ್ ಅವರು ಹಿಂದಿಯ ಕ್ವೀನ್ ರಿಮೇಕ್ ಜೊತೆಗೆ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.

ಕ್ವೀನ್ ರಿಮೇಕ್ ಕನ್ನಡದಲ್ಲಿ ಪಾರುಲ್ ಯಾದವ್ ಅಭಿನಯಿಸಿದ್ದಾರೆ. ತೆಲುಗಿನಲ್ಲಿ ತಮನ್ನಾ ಭಾಟಿಯಾ ಅಭಿನಯಿಸುತ್ತಿದ್ದರೆ ತಮಿಳಿನಲ್ಲಿ ಕಾಜೋಲ್ ಅಗರವಾಲ್ ನಟಿಸುತ್ತಿದ್ದಾರೆ. ಕನ್ನಡದ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆ ಮಾಡಲು ಪಾರುಲ್ ಯಾದವ್ ತೀರ್ಮಾನಿಸಿದ್ದಾರೆ.

ಇದಕ್ಕಾಗಿ ಬೇಕಾದ ಕೆಲಸಗಳಲ್ಲಿ ಪಾರುಲ್ ನಿರತರಾಗಿದ್ದಾರೆ. ಇನ್ನು ಕನ್ನಡ ಮತ್ತು ಮಲಯಾಳಂ ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದ್ದು ತಮಿಳು ಮತ್ತು ತೆಲುಗು ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ಗಾಗಿ ಕಾಯುತ್ತಿದ್ದೇನೆ. ಈ ಭಾಷೆಗಳ ಸರ್ಟಿಫಿಕೇಟ್ ಸಿಕ್ಕ ಕೂಡಲೇ ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುತ್ತೇನೆ ಎಂದು ಪಾರುಲ್ ಯಾದವ್ ಹೇಳಿದ್ದಾರೆ.

ಇದಾದ ನಂತರ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನವ ನಿರ್ಮಾಪಕರ ಜೊತೆಗೆ ಕೆಲಸ ಮಾಡಲಿದ್ದೇನೆ. ಈ ಚಿತ್ರಗಳಲ್ಲೆಲ್ಲ ತಮ್ಮದೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತದೆ. ನಾನು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದೇನೆ ಎಂದರು.

ಹಿರೋಯಿನ್ ಒರಿಯೆಂಟೆಡ್ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಖುಷಿಯಾಗುತ್ತಿದೆ. ಇದು ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣ ಮಾಡಲಾಗುತ್ತದೆ. ಸದ್ಯ ಚಿತ್ರದ ಸ್ಕ್ರಿಪ್ಟ್ ನನ್ನ ಕೈಯಲ್ಲಿದ್ದು ನಿರ್ಮಾಣಕ್ಕೆ ಮುಂದಾಗುವುದಾಗಿ ಪಾರುಲ್ ಯಾದವ್ ಹೇಳಿದ್ದಾರೆ.

No Comments

Leave A Comment