Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗ್ರೇಟ್ ಆಲ್ರೌಂಡರ್: ನಟಿ ಆಶಾ ಭಟ್

ಚಾಲೆಂಜಿಗ್ ಸ್ಟಾರ್ ದರ್ಶನ್ ಗ್ರೇಟ್ ಆಲ್ ರೌಂಡರ್ ಎಂದು ಮಾಡೆಲ್ ಕಮ್ ನಟಿ ಆಶಾ ಭಟ್ ಹೇಳಿದ್ದಾರೆ.

ಆಶಾ ಭಟ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರುವುದರಿಂದ ನಟ-ನಟಿಯರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇನ್ನು ಆಶಾ ಭಟ್ ತಮ್ಮ ಅಭಿಮಾನಿಗಳ ಜೊತೆ ಲೈವ್ ವಿಡಿಯೋ ಚಾಟ್ ನಲ್ಲಿ ಮಾತನಾಡುತ್ತಾ ದರ್ಶನ್ ಓರ್ವ ಗ್ರೇಟ್ ಆಲ್ ರೌಂಡರ್ ಎಂದು ಹೇಳಿದ್ದಾರೆ.

ದರ್ಶನ್ ಅವರಿಗೆ ಎಲ್ಲಾ ಅಭಿರುಚಿಯು ಇದೆ. ಊಟ, ಪ್ರವಾಸ, ಪ್ರಾಣಿ ಪ್ರಿಯ, ತಂತ್ರಜ್ಞಾನದ ಅರಿವಿದೆ. ಹೀಗಾಗಿ ನೀವೆಲ್ಲಾ ಅವರನ್ನು ಡಿ ಬಾಸ್ ಎಂದು ಕರೆಯುತ್ತೀರಿ. ಅವರು ಓರ್ವ ಅದ್ಭುತ ವ್ಯಕ್ತಿ ಎಂದು ಆಶಾ ಭಟ್ ಕರೆದಿದ್ದಾರೆ.

ಮಾಡೆಲ್ ಆಗಿದ್ದ ಆಶಾ ಭಟ್ ಅವರು ಹಿಂದಿಯೂ ಜಂಗ್ಲೀ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದೀಗ ಕನ್ನಡದಲ್ಲಿ ರಾಬರ್ಟ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

No Comments

Leave A Comment