Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಅದಾನಿ ಫೌಂಡೇಶನ್‌ನಿಂದ ಪ್ರಧಾನಿ ನಿಧಿಗೆ 100 ಕೋ.ರೂ

ಪಡುಬಿದ್ರಿ: ಯುಪಿಸಿಎಲ್‌ ಸಂಸ್ಥೆಯು ತನ್ನ ಸಿಎಸ್‌ಆರ್‌ ಯೋಜನೆಯನ್ನು ನಿರ್ವಹಿಸುವ ಅಂಗ ಸಂಸ್ಥೆಯಾದ ಅದಾನಿ ಪ್ರತಿಷ್ಠಾನವು ಕೋವಿಡ್‌-19 ಎದುರಿ ಸಲು ಪ್ರಧಾನಮಂತ್ರಿ ಅವರ ಪರಿಹಾರ ನಿಧಿಗೆ 100 ಕೋ. ರೂ. ದೇಣಿಗೆ ನೀಡಿದೆ.

ಲಾಕ್‌ಡೌನ್‌ನಿಂದಾಗಿ ಉದ್ಯೋಗವೂ ಇಲ್ಲದೆ ತಮ್ಮ ಊರುಗಳಿಗೆ ತೆರಳಲೂ ಆಗದೆ ಸಂತ್ರಸ್ತರಾಗಿರುವ ಸ್ಥಾವರದ ಸುತ್ತಲಿನ ನಂದಿಕೂರು, ಎಲ್ಲೂರು, ಸಾಂತೂರು, ಬೆಳಪು, ಕಾಪು ಪ್ರದೇಶಗಳಲ್ಲಿ ನೆಲೆಸಿರುವ 200 ವಲಸೆ ಕಾರ್ಮಿಕರ ಕುಟುಂಬಗಳಿಗೆ 3.5 ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿಗಳನ್ನು ಕೂಡ ಮಂಗಳವಾರ ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್‌ ಆಳ್ವ ಅವರು ಮಂಗಳವಾರ ವಿತರಿಸಿದರು.

ತಹಶೀಲ್ದಾರ್‌ ಮಹಮ್ಮದ್‌ ಐಸಾಕ್‌, ಅದಾನಿ ಯುಪಿಸಿಎಲ್‌ ಸಂಸ್ಥೆಯ ಎಜಿಎಂ ಗಿರೀಶ್‌ ನಾವಡ ಹಾಗೂ ಹಿರಿಯ ವ್ಯವಸ್ಥಾಪಕ ರವಿ ಆರ್‌. ಜೇರೆ ಉಪಸ್ಥಿತರಿದ್ದರು.

No Comments

Leave A Comment