Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ತೆಂಕುತಿಟ್ಟು ಯಕ್ಷಗಾನದ ಹಿರಿಯ ಸ್ತ್ರೀ ವೇಷಧಾರಿ ಕುರ್ನಾಡು ಶಿವಣ್ಣ ಆಚಾರ್ಯ ಇನ್ನಿಲ್ಲ

ಮಣಿಪಾಲ: ತೆಂಕುತಿಟ್ಟು ಯಕ್ಷಗಾನದ ಹಿರಿಯ ಸ್ತ್ರೀ ವೇಷಧಾರಿ ಕುರ್ನಾಡು ಶಿವಣ್ಣ ಆಚಾರ್ಯ (89) ಅವರು ಕೆಲವು ಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ.

ತೆಂಕು ತಿಟ್ಟು ಯಕ್ಷಗಾನದ ಸಮರ್ಥ ಸ್ತ್ರೀ ವೇಷಧಾರಿಯಾಗಿ ಹೆರ್ಗ, ಧರ್ಮಸ್ಥಳ, ಮೂಲ್ಕಿ, ಕೂಡ್ಲು, ವೇಣೂರು, ಸುಂಕದಕಟ್ಟೆ, ಕಟೀಲು, ತಲಕಲ, ನಂದಾವರ, ಅಡ್ಯಾರು, ಮಲ್ಲ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.

ಸುಭದ್ರೆ, ತಾರೆ, ಸೀತೆ, ಮಂಡೋದರಿ, ಕಯಾದು, ಸುಮತಿ ಮುಂತಾದ ಸ್ತ್ರೀ ಪಾತ್ರಗಳಲ್ಲಿ ಪ್ರಸಿದ್ದಿ ಪಡೆದಿದ್ದ ಶಿವಣ್ಣ ಆಚಾರ್ಯ ಅವರು, ನಾರದ, ಈಶ್ವರ ಮುಂತಾದ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು.

ದಂಬೆ ನಾಗಪ್ಪ ಭಂಡಾರಿಯವರಿಂದ ಯಕ್ಷಗಾನ ನಾಟ್ಯಾಭ್ಯಾಸ ಕಲಿತು, ಚಿಕ್ಕ ತಂದೆ ಶ್ರೀನಿವಾಸ ಆಚಾರ್ಯರಿಂದ ಅರ್ಥಗಾರಿಯನ್ನು ಅಭ್ಯಸಿಸಿದ್ದರು.

ಅನಾರೋಗ್ಯ ನಿಮಿತ್ತ ಮೇಳಗಳ ತಿರುಗಾಟ ನಿಲ್ಲಿಸಿದ್ದ ಕುರ್ನಾಡು ಶಿವಣ್ಣ ಆಚಾರ್ಯರು, ಹಲವಾರು ವರ್ಷಗಳ ಕಾಲ ಹವ್ಯಾಸಿಯಾಗಿ ಸೇವೆ ಸಲ್ಲಿಸಿದ್ದರು. ಬಜಪೆಯ ‘ಭಾರತಿ ಕಲಾ ಆರ್ಟ್ಸ್’ನಲ್ಲಿ ಪ್ರಸಾದನ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು.

ಕುರ್ನಾಡಿನಲ್ಲಿ ವಾಸವಾಗಿದ್ದ ಶಿವಣ್ಣ ಆಚಾರ್ಯರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

No Comments

Leave A Comment