Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಅಮೆರಿಕದಲ್ಲಿ ಕೊರೊನಾ ವೈರಸ್‌ಗೆ 11 ಮಂದಿ ಭಾರತೀಯರು ಬಲಿ: ಕರ್ನಾಟಕದವರಿಗೂ ತಗುಲಿದೆ ಸೋಂಕು!

ವಾಷಿಂಗ್ಟನ್‌: ಕೊರೊನಾ ವೈರಸ್‌ಗೆ ಕನಿಷ್ಠ 11 ಮಂದಿ ಭಾರತೀಯರು ಅಮೆರಿಕದಲ್ಲಿ ಮೃತಪಟ್ಟಿರುವ ಶಾಕಿಂಗ್‌ ಸುದ್ದಿ ಬೆಳಕಿಗೆ ಬಂದಿದೆ. ಅಲ್ಲದೆ, 16 ಜನ ಭಾರತೀಯರು ಮಹಾಮಾರಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊರೊನಾ ವೈರಸ್‌ ಅಮೆರಿಕದಲ್ಲಿ 14,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಜನರನ್ನು ಕೋವಿಡ್‌ – 19 ಸೋಂಕು ಬಾಧಿಸಿದೆ.

ಅಮೆರಿಕದಲ್ಲಿ ಮಾರಣಾಂತಿಕ ಸೋಂಕಿಗೆ ಬಲಿಯಾದ ಎಲ್ಲಾ ಭಾರತೀಯ ನಾಗರಿಕರು ಪುರುಷರಾಗಿದ್ದು, ಅವರಲ್ಲಿ ಹತ್ತು ಮಂದಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರದೇಶದವರು ಎಂದು ತಿಳಿದುಬಂದಿದೆ. ಇನ್ನು, ಬಲಿಯಾದವರಲ್ಲಿ ನಾಲ್ವರು ನ್ಯೂಯಾರ್ಕ್ ನಗರದಲ್ಲಿ ಟ್ಯಾಕ್ಸಿ ಚಾಲಕರಾಗಿದ್ದರು ಎಂದು ಹೇಳಲಾಗಿದೆ.

ಮಲೇರಿಯಾ ಮಾತ್ರೆ ಕಳುಹಿಸದಿದ್ದರೆ ಭಾರತದ ವಿರುದ್ಧ ಪ್ರತೀಕಾರ: ಟ್ರಂಪ್ ಘೋಷಣೆ!

ನ್ಯೂಯಾರ್ಕ್ ನಗರವು ಅಮೆರಿಕದ ಕೋವಿಡ್ -19 ಹಾಟ್‌ಸ್ಪಾಟ್‌ ಆಗಿದ್ದು, ನಗರವೊಂದರಲ್ಲೇ 6,000 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 1,38,000 ಕ್ಕೂ ಹೆಚ್ಚು ಸೋಂಕುಗಳಿಗೆ ಕಾರಣವಾಗಿದೆ. ನ್ಯೂಜೆರ್ಸಿಯಲ್ಲಿ 1,500 ಮಂದಿ ಮೃತಪಟ್ಟಿದ್ದು, ಸುಮಾರು 48,000 ಸೋಂಕುಗಳು ಸಂಭವಿಸಿವೆ.

ಕೊರೊನಾ ವೈರಾಣು ವಿರುದ್ಧ ಹೈಡ್ರಾಕ್ಸಿಕ್ಲೋರೋಕ್ವಿನ್‌ ಬಾಣ? ಮಲೇರಿಯಾ ಔಷಧಕ್ಕೆ ಟ್ರಂಪ್‌ ಪಟ್ಟು; ವೈದ್ಯರು ಸಿಟ್ಟು

ಇನ್ನು, ಫ್ಲೋರಿಡಾದಲ್ಲಿ ಒಬ್ಬ ಭಾರತೀಯ ಪ್ರಜೆ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ ರಾಜ್ಯಗಳಲ್ಲಿನ ಕೆಲವು ಭಾರತೀಯ ಮೂಲದ ಜನರ ರಾಷ್ಟ್ರೀಯತೆಯನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ಟ್ರಂಪ್ ದುಂಬಾಲು ಬಿದ್ದಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯ ರೋಚಕ ವಿವರ!

ಇನ್ನೊಂದೆಡೆ, ಸೋಂಕಿಗೊಳಗಾಗಿರುವ 16 ಭಾರತೀಯರಲ್ಲಿ ನಾಲ್ವರು ಮಹಿಳೆಯರಾಗಿದ್ದು, ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ. 16 ಮಂದಿ ಪೈಕಿ ಎಂಟು ಮಂದಿ ನ್ಯೂಯಾರ್ಕ್, ಮೂವರು ನ್ಯೂಜೆರ್ಸಿಯವರು ಮತ್ತು ಉಳಿದವರು ಟೆಕ್ಸಾಸ್ ಮತ್ತು ಕ್ಯಾಲಿಫೋರ್ನಿಯಾದ ಇತರ ರಾಜ್ಯಗಳಿಂದ ಬಂದವರು ಎಂದು ತಿಳಿದುಬಂದಿದೆ.

ಕೊರೊನಾ ವೈರಸ್‌ ಸೋಂಕಿಗೊಳಗಾದವರು ಕರ್ನಾಟಕ, ಉತ್ತರಾಖಂಡ, ಮಹಾರಾಷ್ಟ್ರ, ಹಾಗೂ ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.

ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ದೂತಾವಾಸ ಕಚೇರಿಗಳು ಸ್ಥಳೀಯ ಅಧಿಕಾರಿಗಳು ಮತ್ತು ಭಾರತೀಯ-ಅಮೆರಿಕನ್ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ಪ್ರಜೆಗಳು ಮತ್ತು ಕೋವಿಡ್ -19 ಪೀಡಿತ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುತ್ತಿವೆ.

ಮಾರಣಾಂತಿಕ ವೈರಸ್ ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಪ್ರಯಾಣ ನಿರ್ಬಂಧಗಳು ಮತ್ತು ನಿಬಂಧನೆಗಳ ಕಾರಣ ಸ್ಥಳೀಯ ನಗರ ಅಧಿಕಾರಿಗಳು ಮೃತರ ಅಂತಿಮ ವಿಧಿ ವಿಧಾನಗಳನ್ನು ನಿರ್ವಹಿಸುತ್ತಿದ್ದಾರೆ. ಮತ್ತು ಅನೇಕ ಸಂದರ್ಭಗಳಲ್ಲಿ ಅವರ ಕುಟುಂಬ ಸದಸ್ಯರಿಗೆ ಅವರ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment