Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಕೋಟ: ಕಾವಡಿ ಗ್ರಾಮ ಅ೦ಕಕ್ಕೆ ದಾಳಿ-7ಮ೦ದಿಯ ಬ೦ಧನ

ಕೋಟ: ಕಾವಡಿ ಗ್ರಾಮದ ಹವರಾಲು ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಕೋಟ ಪೊಲೀಸರು ದಾಳಿ ನಡೆಸಿ ಎಳು ಮಂದಿಯನ್ನು ಬಂಧಿಸಿದ ಘಟನೆ ಸೋಮವಾರದಂದು ನಡೆದಿದೆ.

ಸ್ಥಳೀಯ ನಿವಾಸಿ ಮಧುಕರ ಶೆಟ್ಟಿ, ಜಯರಾಮ ಶೆಟ್ಟಿ, ಪ್ರಶಾಂತ, ರಾಘವೇಂದ್ರ ಪೂಜಾರಿ ಕಾರ್ಕಡ, ಲೊಕೇಶ್ ನಾಯ್ಕ್ ಹೇರಾಡಿ, ಸುಧಾಕರ ಪೂಜಾರಿ ಕಾರ್ಕಡ, ಸುಕೇತ ನಾಯ್ಕ್ ಹೇರಾಡಿ ಬಂಧಿತ ಆರೋಪಿಗಳು.

ಖಚಿತ ಮಾಹಿತಿಯ ಮೇರೆಗೆ ಠಾಣಾಧಿಕಾರಿ ನಿತ್ಯಾನಂದ ಗೌಡ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಜುಗಾರಿಗೆ ಬಳಸಿದ 6880 ರೂ ನಗದು ಹಾಗೂ ಕೋಳಿ ಮತ್ತು 8 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment