Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಫ್ಯಾಮಿಲಿ ಪ್ಯಾಕ್ ಗಾಗಿ ಮತ್ತೆ ಒಂದಾದ ಅರ್ಜುನ್-ಲಿಖಿತ್ ಜೋಡಿಗೆ ಪವರ್ ಸ್ಟಾರ್ ಬೆಂಬಲ

ಸಂಕಷ್ಟ ಕರ ಗಣಪತಿ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಜೋಡಿ ಇದೀಗ ಮತ್ತೆ ಒಂದಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣದ ಮುಂದಿನ ಚಿತ್ರ “ಫ್ಯಾಮಿಲಿ ಪ್ಯಾಕ್” ಗಾಗಿ ಈ ಜೋಡಿ ಮತ್ತೆ ಸೇರಿದೆ. ಅಮೃತಾ ಅಯ್ಯಂಗಾರ್ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕಾಮಿಡಿ ಎಂಟರ್ಟೈನರ್ ಸಂಕಷ್ಟ ಕರ ಗಣಪತಿ ಚಿತ್ರ್ದ ಯಶಸ್ಸಿನ ನಂತರ  ಅರ್ಜುನ್ ಕುಮಾರ್ಹಾಗೂ ಲಿಖಿತ್ ಇದೀಗ ಮತ್ತೆ ಒಂದಾಗಿದ್ದಾರೆ. ಲಿಕೀತ್ ಶೆಟ್ಟಿ ಮತ್ತು ದೇಶರಾಜ್ ರಾಯ್ ಅವರ ಸಹಯೋಗದೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಒಡೆತನದ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಂಆಡಲಿದೆ.

ಚಿತ್ರದಲ್ಲಿ , ರಂಗಾಯಣ ರಘು, ಅಚ್ಯುತ್ ಕುಮಾರ್, ದತ್ತಣ್ಣ, ತಿಲಕ್ ಮತ್ತು ನಾಗಭೂಷಣ ಸಹ ಅಭಿನಯಿಸಲಿದ್ದಾರೆ.ತಾಂತ್ರಿಕ ಸಿಬ್ಬಂದಿಗಳ ಪೈಕಿ ಮಸ್ತಿ ಸಾಂಭಾಷಣೆ ಬರೆದರೆ ಗುರುಕಿರಣ್ ಸಂ,ಗೀತ ಸಂಯೋಜನೆ ಮಾಡಲಿದ್ದಾರೆ.ಮಧು ಎಡಿಟಿಂಗ್ ಕೆಲಸ ನಿರ್ವಹಿಸಲಿದ್ದು ಚಿತ್ರದ ಛಾಯಾಗ್ರಾಹಕರು ಯಾರೆಂದು ಇನ್ನೂ ತೀರ್ಮಾನಿಸಿಲ್ಲ.

ಈ ಮುನ್ನ ಚಿತ್ರತಂಡ  ಏಪ್ರಿಲ್‌ನಲ್ಲಿ ಶೂಟಿಂಗ್ ಪ್ರಾರಂಭಿಸಲುತಯಾರಿ ನಡೆಸಿದ್ದು ಇದೀಗ ಕೊರೋನಾವೈರಸ್ ಹಾವಳಿಯ ಕಾರಣ ಯೋಜನೆಯನ್ನು ಮುಂದೂಡಲಾಗಿದೆ. ಆದರೆ ಚಿತ್ರದ ಫೋಟೋಶೂಟ್ ಕಂಪ್ಲೀಟ್ ಆಗಿದ್ದು “ಫ್ಯಾಮಿಲಿ ಪ್ಯಾಕ್  ಒಂದು ಹಾಸ್ಯಭರಿತ ಮನರಂಜನಾ ಚಿತ್ರ ಎಂದು ನಿರ್ದೇಶಕ ವಿವರಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ, ಅದು ಪ್ರೀತಿಯಾಗಲಿ, ಮದುವೆಯಾಗಲಿ, ಅದು ಕೇವಲ ಹುಡುಗ ಮತ್ತು ಹುಡುಗಿಯ ನಡುವೆ ಮಾತ್ರವಲ್ಲ, ಮತ್ತು ಎರಡು ಕುಟುಂಬಗಳು ಒಟ್ಟಿಗೆ ಸೇರಬೇಕಾಗುತ್ತದೆ. ಇದು ನನ್ನ ಕಥೆಯ ಒಂದು ಭಾಗ. ಇನ್ನೊಂದು ಭಾಗದಲ್ಲಿ ಕಥಾವಸ್ತುವು ನಾಯಕ ಮತ್ತು ನಾಯಕಿಯ ರೋಮ್ಯಾಂಟಿಕ್  ಆಂಗಲ್ ಮತ್ತು ಅವರು ಹೇಗೆ ಭೇಟಿಯಾಗುತ್ತಾರೆ ಎಂಬುದನ್ನು ಅನ್ವೇಷಿಸುತ್ತದೆ ”ಎಂದು ಅರ್ಜುನ್ ಕುಮಾರ್ ಹೇಳುತ್ತಾರೆ,

ಈ ಕಥಾವಸ್ತುವನ್ನು ಒಂದೆರಡು ವರ್ಷಗಳ ಹಿಂದೆ ಸಿದ್ಧಪಡಿಸಲಾಗಿದೆ. ಕಥೆಯನ್ನು ನಾಯಕ ನಟರೊಡನೆ ಚರ್ಚಿಸಿದ್ದಾಗಿದೆ. ಲಿಖಿತ್ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.ಹಾಗೆಯೇ ಅವರು ಹೇಳಿದ ಕೆಲ ಸಲಹೆ ಪಡೆದು ಕಥಾಹಂದರದಲ್ಲಿ ಬದಲಾವಣೆ ತರಲಾಗಿದೆ.  “ನಮ್ಮ ಮೊದಲ ಚಿತ್ರ, ಸಂಕಷ್ಟ ಕರ ಗಣಪತಿ ಯಶಸ್ವಿಯಾಗಿರುವ ಕಾರಣ ನಾವು ಒಂದು ರೊಮ್ಯಾಂಟಿಕ್ ಕಾಮಿಡಿಯನ್ನು ತಯಾರಿಸಲು ಅದರ ಮಾದರಿಯನ್ನೇ ಅನುಸರಿಸುತ್ತೇವೆ. ಎಂದು ಅವರು ಹೇಳಿದ್ದಾರೆ.

ಆರಂಭದಲ್ಲಿ, ಫ್ಯಾಮಿಲಿ ಪ್ಯಾಕ್ ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ತಯಾರಿಸಲು ನಿರ್ಧರಿಸಲಾಗಿತ್ತು. ಇದೊಂದು ಬಹುಭಾಷಾ ಚಿತ್ರವಾಗಬೇಕೆಂದು ನಿರ್ದೇಶಕರು ಬಯಸಿದ್ದರು. ಆದರೆ, ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಆಸಕ್ತಿ ತೋರಿಸಿದ ಬಳಿಕ ಏಕಭಾಷೆಯಲ್ಲಿ ಮಾತ್ರ ಚಿತ್ರ ತಯಾರಿಸಲು ತೀರ್ಮಾನಿಸಲಾಗಿದೆ.  “ನಾವು ಮೊದಲು ಕಥೆಯನ್ನು ಪುನೀತ್‌ಗೆ ಮತ್ತು ನಂತರ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಹೇಲೀದ್ದೆವು. ಅವರಿಗಿದು ಇಷ್ಟವಾಗಿದೆ. ಈ ಚಿತ್ರವನ್ನು ಪ್ರಸಿದ್ಧ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವುದು  ನಮಗೆ ಸಂತಸ ಉಂಟುಮಾಡಿದೆ”  ನಿರ್ದೇಶಕ ಹೇಳಿದ್ದಾರೆ. ಪುನೀತ್ ಅವರ ಹೋಂ ಬ್ಯಾನರ್ ನಲ್ಲಿ “ಕವಲುದಾರಿ”, “ಮಾಯಾಬಜಾರ್” ಬಳಿಕ ಮೂಡಿ ಬರುತ್ತಿರುವ ಮೂರನೇ ಚಿತ್ರ ಇದಾಗಿದೆ.

No Comments

Leave A Comment