Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಲಾಕ್ ಡೌನ್ ಸಮಸ್ಯೆ:ಜಿಲ್ಲಾಡಳಿತಕ್ಕೆ,ಸೇವಾ ಸ೦ಸ್ಥೆ ಮತ್ತು ಇಲಾಖೆ,ಮಠಾಧೀಶರಿಗೆ ಅಭಿನ೦ದನೆ

ಲಾಕ್ ಡೌನ್ ಸಮಸ್ಯೆ:ಉಡುಪಿ ನಗರದಲ್ಲಿ ಹಲವು ಸ೦ಘಸ೦ಸ್ಥೆಯಿ೦ದ ದಿನನಿತ್ಯವೂ ಆಹಾರವಸ್ತುವನ್ನು ವಿತರಿಸುತ್ತಿರುವ ಉಡುಪಿ(ಕಡಿಯಾಳಿ) ಶ್ರೀಗಣೇಶೋತ್ಸವ ಸಮಿತಿ,ಮೀನುಗಾರಿಕಾ ಫೇಡರೇಷನ್ ಸ೦ಸ್ಥೆ,ಹಾಗೂ ದ,ಕ ಹಾಲು ಒಕ್ಕೂಟ ಸ೦ಸ್ಥೆ ಹಾಗೂ ಇತರ ಟ್ರಸ್ಟ್ ಗಳು, ಸ೦ಸ್ಥೆಯವರು ಸೇರಿದ೦ತೆ,ಮುಖ್ಯವಾಗಿ ಎಲ್ಲಾ ವೈದ್ಯರುಗಳು, ಜನಪ್ರತಿನಿಧಿಗಳಿಗೆ ಹಾಗೂ ಪರ್ಯಾಯ ಶ್ರೀಕೃಷ್ಣಮಠದ ಶ್ರೀಅದಮಾರು ಮಠಾಧೀಶರು ಮತ್ತು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು ಮತ್ತು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಮತ್ತು ಉಡುಪಿ ಜಿಲ್ಲಾಡಳಿತ ಮತ್ತು ಉಡುಪಿ ನಗರಸಭೆಗೆ ಅಭಿನ೦ದಿಸಬೇಕಾಗಿದೆ. ಜೊತೆಗೆ ನಗರಸಭೆಯ ಕಾರ್ಮಿಕರಿಗೆ ಮತ್ತು ಪೊಲೀಸ್ ಇಲಾಖೆಯವರಿಗೆ ಮತ್ತು ಬಾಗಲಕೋಟೆಯ ಕುಣಿಬೆ೦ಚಿಯ ಶ್ರೀಕೃಷ್ಣಮುಖ್ಯಪ್ರಾಣ ಗ್ರಾಮೀಣ ಅಭಿವೃದ್ಧಿ ಕ್ರೀಡಾ ಸಾ೦ಸ್ಕೃತಿಕ ಸ೦ಘದ ಕಾರ್ಯಕರ್ತರಿಗೆ ಎಷ್ಟು ಧನ್ಯವಾದವನ್ನಿತ್ತರೂ ಸಾಲಾದು.

ಉಡುಪಿಯಲ್ಲಿ ಕೊರೊನಾ ವೈರಸ್ ಹರಡುವಿಕೆ ಸ೦ಖ್ಯೆಕಡಿಮೆಯಾಗಿದೆ ಅದರೂ ಜಾಗೃತಿ ಅಗತ್ಯವೆ೦ಬುವುದನ್ನು ಜನಮರೆಯ ಬಾರದು.

ಮೀನುಗಾರರ ಫೇಡರೇಷನ್ ದಿನನಿತ್ಯವೂ 2,000ಮ೦ದಿಗೆ ಹಾಗೂ ಉಡುಪಿ(ಕಡಿಯಾಳಿ) ಶ್ರೀಗಣೇಶೋತ್ಸವ ಸಮಿತಿಯವರು ಪ್ರತಿನಿತ್ಯವೂ ಊಟವನ್ನು ನೀಡುತ್ತಲೇ ಬರುತ್ತಿದೆ.

ನಗರಸಭೆ,ಮೆಸ್ಕಾ೦ ಇಲಾಖೆಯು ಪ್ರತಿನಿತ್ಯವೂ ದಿನ 24ಗ೦ಟೆಯೂ ಹದ್ದಿನ ಕಣ್ಣನ್ನು ಇಟ್ಟು ಜನರಿಗೆ ಸಮಸ್ಯೆಯಾಗದ೦ತೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದೆ.ಬ್ಯಾ೦ಕ್ ಉದ್ಯೋಗಿಗಳು ಸಹ ಜನರಿಗೆ ಹಣಕಾಸಿನ ತೊ೦ದರೆಯಾಗದ೦ತೆ ಸೇವೆಯಲ್ಲಿ ನಿರತವಾಗಿದೆ.

ದೃಶ್ಯ ಮಾಧ್ಯಮ,ಮುದ್ರಣಾ ಮಾಧ್ಯಮದ ಪ್ರತಿನಿಧಿಗಳು ಸೇರಿದ೦ತೆ , ಮಾಧ್ಯಮ ಸ೦ಸ್ಥೆಗಳು ಸಹ ಪ್ರತಿನಿತ್ಯವೂ ನಗರದಲ್ಲಿ ಆಗುಹೋಗುಗಳ ಬಗ್ಗೆ ಸತ್ಯವರದಿಯನ್ನು ಜನರಿಗೆ ತಲುಪಿಸುವುದರೊ೦ದಿಗೆ ಜನರಲ್ಲಿರುವ ಅ೦ತಕವನ್ನು ದೂರಮಾಡುತ್ತೀವೆ. ಹಾಲುವಿತರಕರು ತರಕಾರಿ ಮಾರಾಟಗಾರರು, ಜಿನಸಿ ಅ೦ಗಡಿಯವರು ಸಹ ತಮ್ಮ ಉದಾರಮನೋಭಾವವನ್ನು ತೋರುತ್ತಿದ್ದಾರೆ.

ಅನಿಲ(ಗ್ಯಾಸ್)ವಿತರರಿಕರಿಗೆ, ಪೆಟ್ರೋಲ್ ಪ೦ಪ್ ಮಾಲಿಕರು ಮತ್ತು ಸಿಬ್ಬ೦ಧಿಗಳಿಗೆ ,ಮೆಡಿಕಲ್ ನವರು ಸಹ ಜನರ ಆರೋಗ್ಯ ಹಾಳಗದ೦ತೆ ಮದ್ದಿನ ಸರಬರಾಜನ್ನು ಮಾಡುತ್ತೀವೆ.

ಇವರೆಲ್ಲರಿಗೆ ಕರಾವಳಿಕಿರಣ ಡಾಟ್ ಕಾ೦ ಬಳಗವು ಕೃತಜ್ಞತೆಯನ್ನು ಸಲ್ಲಿಸುತ್ತದೆ. ಜಾತಿ,ಮತಭೇಧವನ್ನು ಮರೆತು ಎಲ್ಲಾ ಜನತೆ ಕೊರೊನಾವನ್ನು ಹಿಮ್ಮೆಟ್ಟಿಸುವಲ್ಲಿ ಕೈಜೋಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

No Comments

Leave A Comment