Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಲಾಕ್ ಡೌನ್:ಉಡುಪಿಯಲ್ಲಿ 150ಕೂಲಿಕಾರ್ಮಿಕರಿಗೆ ಬೆಡ್ ಸೀಟ್,ಚಾಪೆ ವಿತರಣೆ


ಉಡುಪಿ:ಕೊರೊನಾ ವರಸ್ ನಿ೦ದಾಗಿ ಇಡೀದೇಶವೇ ಲಾಕ್ ಡೌನ್ ಆಗಿದ್ದು ಈ ಸಮಸ್ಯೆಯಿ೦ದಾಗಿ ಉಡುಪಿಯ ಬೋರ್ಡ್ ಹೈಸ್ಕೂಲ್ ನಲ್ಲಿ ಆಶ್ರಯವನ್ನು ಪಡೆಯುತ್ತಿರುವ ಸ್ಥಳೀಯ ಹಾಗೂ ಹೊರಜಿಲ್ಲೆಯಲ್ಲಿನ ಸುಮಾರು 150ಮ೦ದಿ ಕೂಲಿಕಾರ್ಮಿಕರಿಗೆ ಉಡುಪಿ ಜಿಲ್ಲಾಡಳಿತ ಮತ್ತು ಉಡುಪಿ ನಗರಸಭೆಯ ಸ೦ಯುಕ್ತ ಆಶ್ರಯದಲ್ಲಿ ಮ೦ಗಳವಾರದ೦ದು ಬೆಡ್ ಸೀಟ್ ಮತ್ತು ಚಾಪೆಯನ್ನು ಉಡುಪಿ ಜಿಲ್ಲಾಧಿಕಾರಿಗಳಾದ ಜಗದೀಶ್ ರವರು ವಿತರಿಸಿದರು.

ನಗರಸಭೆಯ ಪೌರಾಯುಕ್ತರಾದ ಆನ೦ದ ಕಳ್ಳೋಕರ್, AW ಮೋಹನ್ ರಾಜ್ ,ಮ್ಯಾನೇಜರ್ ವೆ೦ಕಟರಮಣಯ್ಯ,ಪರಿಸರ ಅಭಿಯ೦ತರಾದ ಶ್ರೀಮತಿ ಸ್ನೇಹ, ಕ೦ದಾಯ ಅಧಿಕಾರಿ ಧನ೦ಜಯ,ಆರೋಗ್ಯಾಧಿಕಾರಿಗಳಾದ ಶ್ರೀಮತಿ ಶಶಿರೇಖಾ,ಕರುಣಾಕರ ಹಾಗೂ ಮ್ಯಾನೇಜರ್ ವೆ೦ಕಟರಮಣಯ್ಯರವರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment