Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಲಾಕ್‌ಡೌನ್‌: ಬೆಂಗ್ಳೂರಿಂದ ಸಿಂಧನೂರಿಗೆ ನಡೆದೂ ನಡೆದೂ ಕಣ್ಣುಮುಚ್ಚಿದ 29 ವರ್ಷದ ಗಂಗಮ್ಮ!

ಹಸಿವು ಲೆಕ್ಕಿಸದೆ ಊರು ಸೇರಬೇಕೆಂಬ ಹೆಬ್ಬಯಕೆಯಲ್ಲಿ ತೆರಳಿದ್ದ ರಾಯಚೂರು ಜಿಲ್ಲೆ ಸಿಂಧನೂರಿನ ವೆಂಕಟೇಶ್ವರ ನಗರದ 29 ವರ್ಷದ ಗಂಗಮ್ಮಳ ಕನಸು ಮಾರ್ಗ ಮಧ್ಯದಲ್ಲೇ ಮುರುಟಿ ಹೋಯಿತು.

ಸೋಮವಾರ ಅವರು ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಕಣ್ಣು ಮುಚ್ಚಿದರು.13 ತಿಂಗಳ ಹಿಂದೆ ಗಂಗಮ್ಮ ಕೆಲವು ಕೂಲಿಗಾರರ ಜತೆಗೂಡಿ ಬೆಂಗಳೂರಿಗೆ ಗುಳೆ ಬಂದಿದ್ದರು. ಇವರೆಲ್ಲ ಕೆಂಗೇರಿಯ ಗ್ಲೋಬಲ್‌ ವಿಲೇಜ್‌ ಅಪಾರ್ಟ್‌ಮೆಂಟ್‌ ನಿರ್ಮಾಣ ಕಾರ್ಮಿಕರಾಗಿದ್ದರು. ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ನಿರ್ಮಾಣ ಕಾರ್ಯ ಬಂದ್‌ ಆಯಿತು. ಮಾರ್ಚ್‌ ಅಂತ್ಯದ ತನಕ ಇದ್ದರೆ ಕೂಲಿ ಸಿಗುತ್ತದೆ ಎನ್ನುವ ಕಾರಣಕ್ಕೆ ಎಲ್ಲರೂ ಚಾತಕ ಪಕ್ಷಿಗಳಂತೆ ಕಾದರು. ಆದರೆ ಗುತ್ತಿಗೆದಾರರು ಕೈ ಎತ್ತಿದರು.

ಕೊನೆಗೆ ಮಾ. 30ರಂದು ಕೂಲಿ ಕಾರ್ಮಿಕರು ಟ್ರ್ಯಾಕ್ಟರ್‌ವೊಂದರಲ್ಲಿ ಪ್ರಯಾಣ ಹೊರಟರು. ತುಮಕೂರಿನ ಪೊಲೀಸರು ಟ್ರ್ಯಾಕ್ಟರ್‌ ತಡೆದರು. ಅಲ್ಲಿಂದ ಹತ್ತಾರು ಕಿ.ಮೀ ಈ ಕೂಲಿಕಾರರು ಕಾಲ್ನಡಿಗೆಯಲ್ಲೆ ಪ್ರಯಾಣಿಸಿದರು. ದಾರಿಯಲ್ಲಿ ತಿನ್ನಲು ಯಾವುದೇ ಆಹಾರ, ಕುಡಿಯಲು ನೀರೂ ಸಿಗದೆ ಕಂಗೆಟ್ಟರು. ಗಂಗಮ್ಮ ಬಳಲಿ ಬೆಂಡಾದರು.

No Comments

Leave A Comment