Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ನಿಜಾಮುದ್ದೀನ್ ತಬ್ಲೀಘಿ ಹಿಂದೆ ಕೊರೋನಾ ಜಿಹಾದಿ ದುರುದ್ದೇಶವಿದೆ: ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ದೆಹಲಿಯ ನಿಜಾಮುದ್ದೀನ್ ತಬ್ಲೀಘಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಂದ ಕೊರೋನಾ ವೈರಸ್ ಹರಡಿಸುವ ದುಷ್ಕೃತ್ಯ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ನಿಜಾಮುದ್ದೀನ್ ತಬ್ಲೀಘಿ ಸಭೆಯ ಹಿಂದೆ ಕೊರೋನಾ ವೈರಸ್ ಜಿಹಾದಿ ವಾಸನೆ ಬಡಿಯುತ್ತಿದೆ. ಹೌದು ಸಭೆಯಲ್ಲಿ ಭಾಗಿಯಾಗಿದ್ದವರ ಪೈಕಿ ಹಲವರು ತಪ್ಪಿಸಿಕೊಂಡು ತಿರುಗುತ್ತಿದ್ದಾರೆ ಎಂದರು.

ಕೊರೋನಾ ವೈರಸ್ ಶಂಕಿತರ ಪತ್ತೆ ಹಚ್ಚಲು ಒಂದ ಜನಾಂಗ ಸಹಕಾರ ಕೊಡುತ್ತಿಲ್ಲ. ಹೀಗಾಗಿ ಅವರನ್ನು ಪತ್ತೆ ಹಚ್ಚಿ ಜೀವಾವಧಿ ಶಿಕ್ಷೆ ಕೊಡಬೇಕಿದೆ. ನೆಲದ ಕಾನೂನು ಪಾಲಿಸಲ್ಲ ಎಂದರೆ ಇದರ ಹಿಂದೆ ಷಡ್ಯಂತ್ರವಿದೆ ಎಂದು ಹೇಳಿದರು.

No Comments

Leave A Comment