Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಕೊರೊನಾ ಸೋಂಕು ಪತ್ತೆಯಾದವರೆಲ್ಲ ಜಮಾತ್ಗೆ ಹೋಗಿ ಬಂದವರಾ? ಬಡವರ ಜೀವಹಾನಿಯಲ್ಲೂ ಧರ್ಮ ರಾಜಕಾರಣ !

ಬೆಂಗಳೂರು: ಕೊರೊನಾ ರೋಗಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರು ಧರ್ಮದ ಲೇಪನ ಮಾಡುತ್ತಿರುವುದನ್ನು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು  ಟ್ವೀಟ್ ಮಾಡುವ ಮೂಲಕ ಖಂಡಿಸಿದ್ದಾರೆ.

ದೇಶದಲ್ಲಿ 3000 ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ, ಅವರೆಲ್ಲ ಜಮಾತ್ಗೆ ಹೋಗಿ ಬಂದವರಾ? ಬಡವರ ಜೀವಹಾನಿಯಲ್ಲೂ ಧರ್ಮ ರಾಜಕಾರಣ ಮಾಡಲು ಹೊರಟ್ಟಿದ್ದೀರಿ ನಿಮಗೇನಾದರೂ ಮಾನವೀಯತೆ ಇದೆಯಾ, ಇದ್ದರೆ ಹೋಗಿ ಬಡವರಿಗೆ ನಿರ್ಗತಿಕರಿಗೆ ಸಾಯ ಮಾಡಿ ಎಂದು ಶೋಭಾ ಕರಂದ್ಲಾಜೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ರಾಜ್ಯದಲ್ಲಿ ಇಲ್ಲಿವರೆಗೂ 144 ಕೊರೊನಾ ಸೋಂಕಿತರ ಪ್ರಕರಣಗಳು ದೃಢಪಟ್ಟಿವೆ. ಅವರೆಲ್ಲರೂ ದೆಹಲಿಯ ಜಮಾತ್ನಿಂದ ಬಂದವರಾ? ನಿಜಾಮುದ್ದೀನ್ ಜಮಾತ್ಗೆ ನಮ್ಮ ರಾಜ್ಯದಿಂದ ಹೋದವರು 95 ಮಂದಿ ಮಾತ್ರ, ಅವರಲ್ಲಿ 31 ಜನರ ವರದಿ ಬಂದಿದೆ. ಅವರಲ್ಲಿ ಯಾರೊಬ್ಬರಲ್ಲೂ ಕೊರೊನಾ ಸೋಂಕು ದೃಢಪಟ್ಟಿಲ್ಲ.  ಕೊರೊನಾ ಹಬ್ಬಿರುವುದು ಚೀನಾದಿಂದ ಅಂತ ಮಾನ್ಯ ಸಂಸದರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

No Comments

Leave A Comment