Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಎಂಟು ತಿಂಗಳಿಂದ ವೇತನ ನೀಡದ ಕಾರಣ:‘ವಿಷ ಕೊಟ್ಟು ಬಿಡಿ, ಸಾಯುತ್ತೇವೆ’ ಸಚಿವ ರಾಮುಲುಗೆ ಮುತ್ತಿಗೆ ಹಾಕಲು ಪೌರಕಾರ್ಮಿಕರು ಯತ್ನ

ರಾಯಚೂರು: ಕಳೆದ ಎಂಟು ತಿಂಗಳಿಂದ ವೇತನ ನೀಡದ ಕಾರಣ ನಗರಸಭೆ ಪೌರಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರಿಗೆ ಘೇರಾವ್ ಹಾಕಲು ಮುಂದಾದ ಘಟನೆ ರವಿವಾರ ನಡೆದಿದೆ.

ಕೋವಿಡ್-19 ಶುರುವಾದ ಬಳಿಕ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಈ ವಿಚಾರ ತಿಳಿದ ಪೌರಕಾರ್ಮಿಕರು ಡಿಸಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಚದುರಿಸಲು ಮುಂದಾದಾಗ ಆಕ್ರೋಶ ಹೊರಹಾಕಿದ ಕಾರ್ಮಿಕರು ವಿಷ ಕೊಟ್ಟು ಬಿಡಿ ಕುಡಿದು ಸಾಯುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

280 ಪೌರ ಕಾರ್ಮಿಕರಿದ್ದು, ಕಳೆದ ಎಂಟು ತಿಂಗಳಿಂದ ವೇತನ ಕೊಟ್ಟಿಲ್ಲ. ಮನೆಯಲ್ಲಿ ಬಿಡಿಗಾಸು ಹಣವಿಲ್ಲ. ರೇಶನ್ ಖಾಲಿಯಾಗಿದೆ. ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲ. ಮನೆಯಲ್ಲಿ ಇರುವ ಸಾಮಗ್ರಿ ಅಡ ಇಟ್ಟು ಜೀವನ ನಡೆಸುತ್ತಿದ್ದೇವೆ. ಹೊರಗೆ ಸಾಲ ಕೊಡುತ್ತಿಲ್ಲ. ನಾವು ಜೀವನ ನಡೆಸಬೇಕೆ ಇಲ್ಲವೇ. ಇಲ್ಲವಾದರೆ ವಿಷ ಕೊಡಿ ಎಂದರು ಆಕ್ರೋಶ ಹೊರಹಾಕಿದರು.

ಕಮಿಶನರ್ ಗೆ ಕೇಳಿದರೆ ಯೋಜನಾ ನಿರ್ದೇಶಕರಿಗೆ ಕೇಳಿ ಅಂತಾರೆ. ಅವರನ್ನು ಕೇಳಿದರೆ ಇವರನ್ನು ಕೇಳಿ ಅಂತಾರೆ.  ಎಲ್ಲ ಕಡೆ ರೋಗ ಬಂದು ಜನ ಮನೆಯಲ್ಲಿದ್ದರೆ ನಾವು ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಕೂಡಲೇ ವೇತನ ಪಾವತಿಸುತ್ತಿದ್ದರೆ ಮುಂದಿನ ಅನಾಹುತಕ್ಕೆ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

No Comments

Leave A Comment