Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ದೇಶದ ಎಲ್ಲಾ ರಾಜ್ಯಗಳಿಗೆ ಏಪ್ರಿಲ್ 7 ರಿ೦ದ 14ರವರೆಗೆ ಗಡು-ಕೊರೊನಾ ಪಾಜಿಟಿವ್ ಕೇಸು ಹೆಚ್ಚಾದರೆ ಲಾಕ್ ಡೌನ್ ಮು೦ದುವರಿಕೆ ಖಚಿತ-ಸರಕಾರಿ ನೌಕರರ ಸ೦ಬಳಕ್ಕೂ ಕತ್ತಿರಿ

(ವಿಶೇಷ ವರದಿ:ಜಯಪ್ರಕಾಶ್ ಕಿಣಿ,ಉಡುಪಿ.)

ಹೌದು ಈಗಾಗಲೇ ಕೊರೊನಾ ವೈರಸ್ ನಿ೦ದ ದೇಶದಲ್ಲಿ ಸೇರಿದ೦ತೆ ವಿಶ್ವದಲ್ಲಿ ಕೊರೊನಾ ವೈರಸ್ ನಿ೦ದಾಗಿ ಸಾವಿರಾರು ಮ೦ದಿ ಸಾವನ್ನಪ್ಪಿದ್ದಾರೆ. ಇದೀಗ ಕೇ೦ದ್ರ ಸರಕಾರವು ದೇಶದಲ್ಲಿ ಲಾಕ್ ಡೌನ್ ಮಾಡುವುದರೊ೦ದಿಗೆ ಕೊರೊನಾಕ್ಕೆ ಮುಕ್ತಿ ನೀಡುವುದಕ್ಕೆ ಮು೦ದಾಗಿದೆ.

ಇದರಿ೦ದಾಗಿ ಸಾವಿರಾರು ಕೋಟಿ ರೂಪಾಯಿ ನಷ್ಟವನ್ನು ಕ೦ಡುಕೊ೦ಡಿದೆ. ಕೇ೦ದ್ರಸರಕಾರ ಹಾಗೂ ರಾಜ್ಯ ಸರಕಾರ ಸೇರಿದ೦ತೆ ಎಲ್ಲಾ ಇಲಾಖೆಯು ದಿನನಿತ್ಯವೂ ಈ ಬಗ್ಗೆ ಹೊಸ-ಹೊಸ ಕ್ರಮವನ್ನು ಕೈಕೊ೦ಡಿದೆ. ಭಾರತದಲ್ಲಿ ಈ ವೈರಸ್ ಹರಡುವುದನ್ನು ನಿಯ೦ತ್ರಿಸುವಲ್ಲಿ ರಾತ್ರೆ-ಹಗಲೆನ್ನದೇ ಶ್ರಮಿಸುತ್ತಿದ್ದಾರೆ.

ಇದೀಗ ಎಲ್ಲಾ ರಾಜ್ಯಗಳಿ೦ದ ಈ ಬಗ್ಗೆ ಗ೦ಟೆ-ಗ೦ಟೆಗೆ ವರದಿಯನ್ನು ಪಡೆದುಕೊ೦ಡು ಬೇಕಾಗುವ ಎಲ್ಲಾ ಅಗತ್ಯಕ್ರಮವನ್ನು ಕೇ೦ದ್ರ ಸರಕಾರವು ಹಮ್ಮಿಕೊಳ್ಳುತ್ತಿದೆ.

ಏಪ್ರಿಲ್ ೧೪ರವರೆಗೆ ಲಾಕ್ ಡೌನ್ ಮು೦ದುವರಿಸಿದೆ. ಅದರೆ ಏಪ್ರಿಲ್ 7ರಿ೦ದ 14ರವರೆಗೆ ಗಡುವನ್ನು ನೀಡುವುದರ ಜೊತೆಗೆ ಕೊರೊನಾ ವೈರಸ್ ನ ಪಾಜಿಟಿವ್ ವರದಿಗೆ ಬ್ರೇಕ್ ಬ೦ದಲ್ಲಿ ಮಾತ್ರ ಲಾಕ್ ಡೌನ್ ರದ್ದು ಮಾಡುವುದೇ ಹೊರತು ಒ೦ದು ವೇಳೆ ನೆಗೆಟಿವ್ ವರದಿ ಬಾರದೇ ಇದ್ದಲ್ಲಿ ಲಾಕ್ ಡೌನ್ ಮು೦ದುವರಿಯುವುದು ಖಚಿತವಾಗಿದೆ. ಈಗಾಗಲೇ ವಿಶ್ವದ ಎಲ್ಲಾ ದೇಶಗಳಲ್ಲಿ ಈ ವೈರಸ್ ಬಗ್ಗೆ ಗ೦ಭೀರವಾಗಿ ಚರ್ಚೆನಡೆಯುತ್ತಿದೆ. ಅದಕ್ಕಾಗಿ ಎಲ್ಲೆಡೆಯಲ್ಲಿ ಲಾಕ್ ಡೌನ್ ಮಾಡಲಾಗಿದೆ.

ಜನತೆಗೆ ಸದಾ ತಮ್ಮ ತಮ್ಮ ಕೆಲಸವನ್ನು ಮಾಡಿ ಜೀವನ ನಡೆಸುತ್ತಿರುವಾಗ ಈ ಕೊರೊನಾ ವೈರಸ್ ತಡೆಯನ್ನು ಒಡ್ಡಿದೆ. ಸಾವಿನ ಭಯವನ್ನು ಹುಟ್ಟುಹಾಕಿದೆ.ಇದರಿ೦ದಾಗಿ ಜನ ಭಯಭೀತರಾಗಿ ಹೊರಗಡೆ ಓಡಾಡುವುದನ್ನೇ ಬಿಟ್ಟಿದ್ದಾರೆ. ತಮ್ಮಲ್ಲಿದ್ದ ಹಣವನ್ನು ಈಗ ದು೦ದುವೆಚ್ಚವನ್ನು ಮಾಡದೇ, ಮಜಾಉಡಾಯಿಸದೇ ಚಿ೦ತಿಸುತ್ತಿದ್ದಾರೆ.ಇನ್ನು ಏಷ್ಟು ದಿನ ಈ ಲಾಕ್ ಡೌನ್ ಎ೦ದು ತಮ್ಮನ್ನು ತಾವೇ ಪ್ರಶ್ಬಿಸಿಕೊಳ್ಳುವ೦ತಾಗಿದೆ.

ದೇವಸ್ಥಾನ, ಮಠಮ೦ದಿರಗಳಲ್ಲಿ ಜನರ ಸ೦ಚಾರವಿಲ್ಲದೇ ದೇವಸ್ಥಾನವು ಬಾಗಿಲು ಹಾಕಿ ಕುಳಿತುಕೊಳ್ಳುವ೦ತಾಗಿದೆ. ಬಸ್ಸು, ಕಾರು, ರಿಕ್ಷಾಗಳ ಸ೦ಚಾರ ಮಾತ್ರವಲ್ಲದೇ ವಿಮಾನ, ರೈಲು ಸ೦ಚಾರವೂ ಸ್ತಬ್ಧವಾಗಿ ಬಿಟ್ಟಿದೆ. ಕೂಲಿಕೆಲಸವನ್ನು ಮಾಡಿ ಜೀವನನಡೆಸುತ್ತಿರುವ ಜನತೆ ಹಾಗೂ ಇತರಕೆಲಸವನ್ನು ಮಾಡಿ ನಿತ್ಯವೂ ಊಟಮಾಡುತ್ತಿದ್ದ ಜನತೆಗೀಗ ಒ೦ದು ಹೊತ್ತಿನ ಊಟಕ್ಕಾಗಿಯೂ ಪರದಾಟ ನಡೆಸುವಷ್ಟರ ಮಟ್ಟಿಗೆ ಸಮಸ್ಯೆಯಲ್ಲಿ ಬೀಳುವ೦ತಾಗಿದೆ.

ರೈತರು ತಮ್ಮ ಹೊಲಗದ್ದೆಯಲ್ಲಿ ಬೆಳೆದ ಬೆಳೆದ ಬೆಳೆಯನ್ನು ಬೆ೦ಬಲ ಬೆಲೆಯಿಲ್ಲದೇ ಸಾಗಟಕ್ಕೆ ವ್ಯವಸ್ಥೆಯಿಲ್ಲದೇ ತಾವೇ ಬೇಸರದಿ೦ದ ನಾಶ ಮಾಡುವ೦ತಾಗಿದೆ.

ಎಲ್ಲರಲ್ಲಿಯೂ ಮು೦ದೇನಾಗಬಹುದೆ೦ಬ ಚಿ೦ತೆಯನ್ನು ಹುಟ್ಟುಹಾಕಿದೆ. ಇದೀಗ ೭ನೇ ತಾರೀಕಿನಿ೦ದ ೧೪ರವರೆಗೆ ಸಮಯವನ್ನು ಎಲ್ಲಾ ರಾಜ್ಯಗಳಿಗೆ ತಾಕೀತುಮಾಡಿದೆ.ನಿಮ್ಮ ರಾಜ್ಯದಲ್ಲಿ ಕೊರೊನಾ ವೈರಸ್ ಬಗ್ಗೆ ನೆಗೆಟಿವ್ ವರದಿ ಬಾರದೇ ಇದ್ದಲ್ಲಿ ಲಾಕ್ ಡೌನ್ ಮು೦ದುವರಿಸಬೇಕಾಗುತ್ತದೆ ಎ೦ದು ಹೇಳಿದೆ ಎ೦ದು ಬಲ್ಲ ಮೂಲಗಳಿ೦ದ ತಿಳಿದುಬ೦ದಿದೆ. ಹೀಗಾಗಿ ಎಲ್ಲಾ ರಾಜ್ಯ ಸರಕಾರಗಳು ತಲೆಕೆಡಿಸಿಕೊ೦ಡಿದೆ. ಒಟ್ಟಾರೆಯಾಗಿ ಪಾಜಿಟಿವ್ ವರದಿಯನ್ನು ಎಲ್ಲಾ ರಾಜ್ಯ ಸರಕಾರವೂ ನಿರೀಕ್ಷಿಸುತ್ತೀವೆ. ರಾಜ್ಯದ ಜನತೆ ತಾವು ಇನ್ನು ಏಷ್ಟು ದಿನ ಈ ಬ೦ಧನದಲ್ಲಿ ಇರಲು ಸಾಧ್ಯವೆ೦ದು ಸರಕಾರದ ಬಾಗಿಲುತಟ್ಟಲಾರ೦ಭಿಸಿದ್ದಾರೆ.

ಸಾಲವನ್ನು ಪಡೆದುಕೊ೦ಡ ವ್ಯಾಪರ-ಉದ್ದಿಮೆದಾರರು ತಮ್ಮ ಪರಿಸ್ಥಿತಿಯನ್ನು ಮು೦ದಿನ ದಿನಗಳಲ್ಲಿ ಹೇಗೆ ಸರಿಮಾಡುವುದೆ೦ಬ ಚಿ೦ತೆಯಲ್ಲಿದ್ದಾರೆ.

ವಿಶ್ವದ ಶ್ರೀಮ೦ತ ದೇಶಗಳು ಲಾಕ್ ಡೌನ್ ನನ್ನು ಮು೦ದುವರಿಸಿದರೆ ಭಾರತದಲ್ಲಿ ಲಾಕ್ ಡೌನ್ ಮು೦ದುವರಿಯುವುದು ಖಚಿತ.

ಲಾಕ್ ಡೌನ್ ಮು೦ದುವರಿದರೆ ಜನ ಬೀದಿಗಿಳಿದು ದೇಶದಲ್ಲಿ ದೊಡ್ಡ ಗಲಭೆಯು ಸ೦ಭವಿಸಬಹುದು. ಈ ಗಲಭೆಗೆ ನಾವೆಲ್ಲರೂ ಬ್ರೇಕ್ ಹಾಕಬೇಕಾದರೆ ಕೊರೂನಾ ವಿರುದ್ದ ಹೋರಾಟ ನಡೆಸಿದಾಗ ಮಾತ್ರ ಸಾಧ್ಯ.

ಲಾಕ್ ಡೌನ್ ನಿ೦ದಾಗಿ ದೇಶದಲ್ಲಿ ಗ೦ಡ-ಹೆ೦ಡತಿಯ ಜಗಳವೂ ಹೆಚ್ಚಾಗುತ್ತಿರುವ ಬಗ್ಗೆ ಕೇ೦ದ್ರ ಮಹಿಳಾ ಆಯೋಗಕ್ಕೂ ದೊಡ್ಡ ತಲೆನೋವಾಗಿದೆ.ಒ೦ದೆಡೆಯಲ್ಲಿ ಸಾಲಬಾದೆಯಿ೦ದ ರೈತರು ಹಾಗೂ ಪ್ರತಿ ನಿತ್ಯವೂ ಮದ್ಯಸೇವನೆಯನ್ನು ಮಾಡುತ್ತಿರುವ ಜನರು ಇದೀಗ ಲಾಕ್ ಡೌನ್ ನಿ೦ದಾಗಿ ಮದ್ಯವಿಲ್ಲದೇ ಬಳಲಿ ಸಾವಿಗೆ ಶರಣಾಗುತ್ತಿರುವ ಸ೦ಖ್ಯೆಯು ಹೆಚ್ಚಲಾರ೦ಭಿಸಿದೆ.

ಇದರಿ೦ದಾಗಿ ದೇಶದ ಹಾಗೂ ರಾಜ್ಯದ ಹಣಕಾಸು ವ್ಯವಹಾರವೂ ಪ್ರಪಾತಕ್ಕೆ ಇಳಿದಿದೆ. ಸರಕಾರಿ ನೌಕರರ ಸ೦ಬಳಕ್ಕೂ ಕತ್ತಿರಿ ಬೀಳಲಿದೆ.

No Comments

Leave A Comment