Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಲಾಕ್’ಡೌನ್ ನಡುವೆಯೂ ಕಾರಿನಲ್ಲಿ ಜಾಲಿ ರೈಡ್: ಅಪಘಾತಕ್ಕೀಡಾಗಿ ನಟಿ ಶರ್ಮಿಳಾ ಮಾಂಡ್ರೆಗೆ ಗಾಯ

ಬೆಂಗಳೂರು: ಕೊರೋನಾ ಭೀತಿಯಿಂದಾಗಿ ದೇಶವನ್ನೇ ಲಾಕ್ ಡೌನ್ ಮಾಡಿದ್ದರೂ, ಕಾರಿನಲ್ಲಿ ಜಾಲಿ ರೈಡ್’ಗೆ ಹೊರಟ ನಟಿ ಶರ್ಮಿಳಾ ಮಾಂಡ್ರೆಯವರ ಕಾರು ಅಪಘಾತಕ್ಕೀಡಾಗಿ, ಗಾಯಗೊಂಡಿರುವ ಘಟನೆ ಶನಿವಾರ ವಸಂತನಗರದಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಎಂದು ಹೇಳಲಾಗುತ್ತಿದೆ.

ನಟಿ ಶರ್ಮಿಳಾ ಅವರು ಜಾಗ್ವಾರ್ ಕಾರಿನಲ್ಲಿ ಸ್ನೇಹಿತರ ಜೊತೆಗೆ ಜಾಲಿ ರೈಡ್’ಗೆ ಹೊರಟಿದ್ದರು. ಈ ವೇಳೆ ವಸಂತನಗರ ಅಂಡಲ್ ಪಾಸ್ ಪಿಲ್ಲರ್’ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಶರ್ಮಿಳಾ ಅವರ ಮುಖ ಹಾಗೂ ತಲೆಗೆ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ.

ಕಾರಿನಲ್ಲಿದ್ದ ಶರ್ಮಿಳಾ ಅವರ ಸ್ನೇಹಿತರೊಬ್ಬರಿಗೆ ಕೈ ಮೂಳೆ ಮುರಿದಿದ್ದು, ಇಬ್ಬರೂ ಇದೀಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಲಾಗುತ್ತಿದೆ.

ಘಟನೆ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

No Comments

Leave A Comment