Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ಕೋವಿಡ್-19 ದೇಶದಲ್ಲಿ ಮತ್ತೊಂದು ಬಲಿ: ಶ್ರೀನಗರದ 65 ವರ್ಷದ ಸೋಂಕಿತ ಸಾವು

ಶ್ರೀನಗರ: ಕೋವಿಡ್-19 ಸೋಂಕು ದಾಳಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಲಿಯಾಗಿದೆ. ಶ್ರೀನಗರದ 65 ವರ್ಷದ ವ್ಯಕ್ತಿ ಸೋಂಕು ಕಾರಣದಿಂದ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಶ್ರೀನಗರದ ದಾಲ್ ಗೇಟ್ ನ ಎದೆರೋಗಗಳ ಆಸ್ಪತ್ರೆಗೆ ದಾಖಲಾಗಿದ್ದ 65 ವರ್ಷದ ಪ್ರಾಯದ ಕೋವಿಡ್-19 ಸೋಂಕಿತ ವ್ಯಕ್ತಿ ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಸೋಂಕಿತ ವ್ಯಕ್ತಿತು ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ನಾವು ಬಹಳಷ್ಟಯು ಶ್ರಮ ಪಟ್ಟರೂ ಕೋವಿಡ್-19 ಸೋಂಕಿತ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗಿಲ್ಲ. ಇಂದು ಬೆಳಿಗ್ಗೆ ಹೃದಯಾಘಾತದಿಂದ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ವರದಿ ಮಾಡಿವೆ.

No Comments

Leave A Comment