Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ಕೋವಿಡ್ 19: ಲಾಕ್ ಡೌನ್ ಗೆ ಸಡ್ಡು ಹೊಡೆದು ಪೊಲೀಸರಿಗೆ ಖಡ್ಗ ಝಳಪಿಳಿಸಿದ ದೇವಮಹಿಳೆ!

ಲಕ್ನೋ: ಕೋವಿಡ್ 19 ವೈರಸ್ ತಡೆಗಟ್ಟಲು ಇಡೀ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದ ನಡುವೆಯೂ ಸ್ವಯಂ ಘೋಷಿತ “ಮಾ ಆದಿ ಶಕ್ತಿ” ದೇವ ಮಹಿಳೆಗೆ ಧಾರ್ಮಿಕ ಪ್ರಾರ್ಥನಾ ಸಭೆಯನ್ನು ಬಂದ್ ಮಾಡುವಂತೆ ಸೂಚಿಸಿದ್ದಕ್ಕೆ ಖಡ್ಗವನ್ನು ಹಿಡಿದು ಪೊಲೀಸರಿಗೆ ಧಮ್ಕಿ ಹಾಕಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಕೆಂಪು ಸೀರೆಯನ್ನು ಉಟ್ಟಿದ್ದ ಸ್ವಯಂ ಘೋಷಿತ ದೇವ ಮಹಿಳೆ ಖಡ್ಗವನ್ನು ಪೊಲೀಸರ ಎದುರು ತಿರುಗಿಸುತ್ತಿರುವ ವೀಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿದೆ. ಹೇಳಿದ ಮಾತನ್ನು ಕೇಳದ ಸ್ವಯಂಘೋಷಿತ ಮಹಿಳೆಯನ್ನು 15ಕ್ಕೂ ಅಧಿಕ ಪೊಲೀಸರು ಸುತ್ತುವರಿದು ಸೆರೆಹಿಡಿದು ವಾಹನದೊಳಕ್ಕೆ ಹಾಕಿಕೊಂಡು ಹೋಗಿರುವುದಾಗಿ ವರದಿ ವಿವರಿಸಿದೆ.

No Comments

Leave A Comment