Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಕೋವಿಡ್-19 ಕಳವಳ: ರಸ್ತೆ ಅಗೆದು ಗ್ರಾಮಸ್ಥರಿಂದ ಊರಿಗೆ ದಿಗ್ಬಂಧನ

ಕೊಪ್ಪಳ: ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ತಾಲೂಕಿನ ಕಾಸನಕಂಡಿ ಗ್ರಾಮದ ಜನರು ಇಡೀ ಊರಿಗೆ ದಿಗ್ಬಂಧನ ಹಾಕಿ, ತಮ್ಮನ್ನು ತಾವು ರಕ್ಷಣೆಗೆ ಮುಂದಾಗಿದ್ದಾರೆ‌.

ಕೊಪ್ಪಳದಿಂದ ಕಾಸನಕಂಡಿ ಗ್ರಾಮಕ್ಕೆ ತೆರಳುವ ರಸ್ತೆಯನ್ನೆ ಸಂಪೂರ್ಣ ಬಂದ್ ಮಾಡಿಸಿದ್ದಾರೆ. ಜನ ಸಂಚಾರ ಸಂಪೂರ್ಣ ಸ್ಥಗಿತ ಮಾಡಿದ್ದಾರೆ.

ಜೆಸಿಬಿ ಮೂಲಕ ರಸ್ತೆಯನ್ನು ಅಗೆದು ಯಾರೂ ಸಂಚಾರ ಮಾಡದಂತೆ ಗ್ರಾಮಸ್ಥರಿಗೆ ಬಂಧನ ವಿಧಿಸಿದ್ದಾರೆ. ಕೋವಿಡ್-19 ಕಳವಳದಿಂದ ಈ ಕ್ರಮ ಕೈಗೊಂಡಿದ್ದು, ಊರಿಗೆ ಯಾರೂ ಬಾರದಂತೆ, ಊರಿನಿಂದ ಯಾರೂ ಹೊರಹೋಗದಂತೆ ರಸ್ತೆ ಅಗಿದು ತಡೆ ಹಾಕಿದ್ದಾರೆ.

No Comments

Leave A Comment