Log In
BREAKING NEWS >
ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ಕೋವಿಡ್-19 ನಿರಾಶ್ರಿತರಿಗೆ 50 ಲಕ್ಷ ರೂ. ಮೌಲ್ಯದ ಅಕ್ಕಿ ನೀಡಿದ ಸೌರವ್ ಗಂಗೂಲಿ

ಕೋಲ್ಕತ್ತಾ: ದೇಶದಲ್ಲಿ ಕೋವಿಡ್-19 ಸೋಂಕು ಭೀತಿಯಿಂದ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಬಹಳಷ್ಟು ಮಂದಿ ಅನ್ನ, ಊಟಕ್ಕೆ ಪರದಾಡುತ್ತಿದ್ದಾರೆ. ಹಲವು ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಈ ಸಮಯದಲಲ್ಲಿ ನಿರಾಶ್ರಿತರಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಇಂತಹ ಹಲವರಿಗೆ ಸರ್ಕಾರಿ ಶಾಲೆಗಳಲ್ಲಿ ನೆಲೆ ನೀಡಲಾಗಿದೆ. ಇವರ ಊಟಕ್ಕಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.

ಸೌರವ್ ಗಂಗೂಲಿ ಅವರು ಈ ನಿರಾಶ್ರಿತರ ಸಹಾಯಕ್ಕಾಗಿ ಸುಮಾರು 50 ಲಕ್ಷ ರೂ. ಮೌಲ್ಯದ ಅಕ್ಕಿಯನ್ನು ವಿತರಿಸುತ್ತಿದ್ದಾರೆ. ಈ ಬಗ್ಗೆ ಬೆಂಗಾಲ್ ಕ್ರಿಕೆಟ್ ಅಸೋಸಿಯೇಶನ್ ಟ್ವೀಟ್ ಮಾಡಿದೆ.

ಸೌರವ್ ಗಂಗೂಲಿ ಅವರು ತೆಗೆದುಕೊಂಡಿರುವ ಈ ಮುಂದಾಳತ್ವ ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ. ಜನರಿಗೆ ಸಹಾಯವಾಗಲಿ ಎಂದು ಸಿಎಬಿ ಟ್ವೀಟ್ ಮಾಡಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 627ಕ್ಕೇರಿದೆ. ದೇಶವ್ಯಾಪಿ ಲಾಕ್ ಡೌನ್ ನ ಮೊದಲ ದಿನವಾದ ಬುಧವಾರ ದೇಶದಲ್ಲಿ 101 ಪ್ರಕರಣಗಳು ದಾಖಲಾಗಿದೆ.

No Comments

Leave A Comment