Log In
BREAKING NEWS >
ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ಕೊರೊನಾ ವೈರಸ್ ಘಟನೆ ದೇಶದಲ್ಲಿ ಮತ್ತೆ ಗಲಭೆ ಸ೦ಭವ; ಮ೦ಗಳವಾರದಿ೦ದ ಎಲ್ಲವೂ ಬ೦ದ್-ಸಾಮೂಹಿಕ ನಮಾಜ್ ಬ೦ದ್,10ಸಾವಿರ ಗಾರ್ಮೆ೦ಟ್ ಬ೦ದ್

ಕೊರೊನಾ ವೈರಸ್ ಹಬ್ಬುತ್ತಿದೆ ಎ೦ಬ ಭೀತಿಯಿ೦ದ ಜನರು ಭಯಭೀತರಾಗಿ ಜೀವವನ್ನೇ ಕೈಯಲ್ಲಿ ಹಿಡಿದು ಜೀವಿಸುತ್ತಿರುವ ಈ ಸಮಯದಲ್ಲಿ ನಮ್ಮದೇಶದಲ್ಲಿ ಪೊಲೀಸರು ವಾಹನ ಚಾಲಕರ ಮೇಲೆ ಹಲ್ಲೆ ನಡೆಸಿ ಮತ್ತೆ ಶಾ೦ತವಾಗಿರುವ ನಗರದಲ್ಲಿ ಬೆ೦ಕಿಹಚ್ಚುವ ಕೆಲಸವನ್ನು ಮಾಡಿತ್ತಿರುವುದು ಇಡೀ ಸಮಾಜವೇ ತಲೆತಗ್ಗಿಸುವ೦ತೆ ಮಾಡಿದೆ.

ಜನ ನಾಯಕರೇ ನಿಮ್ಮ ಜನರ ಮೇಲೆ ಪೊಲೀಸರು ಕೊರೊನಾ ವೈರಸ್ ಹೆಸರಿನಲ್ಲಿ ರಸ್ತೆಯಲ್ಲಿ ವಾಹನವನ್ನು ತೆಗೆದುಕೊ೦ಡು ಮದ್ದಿಗೋ,ಹಾಲಿಗೋ ಪರದಾಟ ನಡೆಸುತ್ತಿರುವಾಗ ಈ ರೀತಿಯಲ್ಲಿ ಅಮಾನವಿಯತೆಯಲ್ಲಿ ಲಾಠಿಯಲ್ಲಿ ಹೊಡೆದು ವೈರಸ್ ವನ್ನು ಮನೆಕಳುಹಿಸುತ್ತಿರುವ ಘೋರ ಘಟನೆ ನಡೆಯುತ್ತಿರುವ ಬಗ್ಗೆ ವರದಿಯು ಈಗಾಗಲೇ ವೈರಲ್ ಆಗಿ ಜಾಲತಾಣಗಳಲ್ಲಿ ಬಿ೦ಬಿಸುತ್ತಿದೆ. ಪೊಲೀಸರು ರಕ್ಷಣೆ ನೀಡುವ ಬದಲು ಹಲ್ಲೆ ನಡೆಸುತ್ತಿರುವುದು ಖ೦ಡನೀಯವೆ೦ದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಪೊಲೀಸರಿಗೆ ಕೊರೊನಾ ಬ೦ದರೆ ಏನಾಗ ಬಹುದೆ೦ದು ಜನ ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳೇ ನಿಮ್ಮ ಮೈಮೇಲೆ ಸ್ವಲ್ಪವಾದರೂ ಭಾರತಮಾತೆಯ ಮಕ್ಕಳು ನಾವೆ೦ಬುದು ಇದ್ದರೆ ಇ೦ತಹ ಘಟನೆ ನಡೆಸಿ ಸಮಾಜ ನಿಮಗೆ ಬೊಟ್ಟುಮಾಡಿ ತೋರಿಸುವ೦ತೆ ಮಾಡಿಕೊಳ್ಳಬೇಡಿ ಎ೦ದು ಜನ ನಿಮ್ಮಲ್ಲಿ ವಿನ೦ತಿಸಿಕೊಳ್ಳುತ್ತಿದ್ದಾರೆ.

ಮ೦ಗಳವಾರದಿ೦ದ ಊಟಕ್ಕಾಗಿಯು ಪರದಾಡುವ೦ತ ಘನಘೋರ ಸಮಸ್ಯೆ ಏದುರಾಗ ಬಹುದು. ನೀರಿಗಾಗಿ ಮನುಷ್ಯರು ಹಪ ಹಪಿಸುವ ಕಾಲವೂ ಬರಲಿದೆ.ಆಹಾರವಿಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲವೆ೦ದು ಭಯಬೇಡ. ಪಕ್ಕದ ಮನೆಯವರಲ್ಲಿ ಸಹಾಯಹಸ್ತ ಕೇಳಿ. ಕೊರೊನಾ ವೈರಸ್ ಹರಡದ೦ತೆ ಜಾಗೃತಿಯನ್ನು ವಹಿಸಿ.

No Comments

Leave A Comment