Log In
BREAKING NEWS >
ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ಮಂಗಳೂರು: ಲಾಕ್ ಡೌನ್ ಹಿನ್ನಲೆ: ರಸ್ತೆಯಲ್ಲಿ ಜನರು ಸಂಚಾರ ಮಾಡದಂತೆ ಪೊಲೀಸರಿಂದ ಸೂಚನೆ

ಮಂಗಳೂರು: ಲಾಕ್ ಡೌನ್ ಘೋಷಿಸಿದ ಮಂಗಳೂರು ನಗರದಲ್ಲಿ ಸೋಮವಾರ ಬೆಳಿಗ್ಗೆ ಹಾಲು, ಪತ್ರಿಕೆ, ಮೆಡಿಕಲ್, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಜನ ಮುಂದಾಗಿದ್ದರು. ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭವಾಗುತ್ತಿದ್ದಂತೆ ದಿನನಿತ್ಯ ಬಳಕೆ ವಸ್ತುಗಳ ವ್ಯಾಪಾರ ಭರಾಟೆ ಜೋರಾಗಿದೆ.

ಮಂಗಳೂರುನಲ್ಲಿ ಖಾಸಗಿ ಮತ್ತು ಕೆ ಎಸ್ಆ ರ್ ಟಿ ಸಿ ಬಸ್ ಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ದಿನನಿತ್ಯದ ಅಂಗಡಿಗಳು ಹೊರತುಪಡಿಸಿ ಉಳಿದ ಅಂಗಡಿಗಳು ಸಂಪೂರ್ಣ ಬಂದ್ ಆಗಿದೆ.

ಸೋಮವಾರ ಮಂಗಳೂರು ಲಾಕ್ ಡೌನ್ ವಿಚಾರವಾಗಿ ಬಂದ್ ಆದೇಶ ಇದ್ದರೂ ವಾಹನ ಸಂಚಾರ, ಜನರ ಓಡಾಟ ಹಿನ್ನೆಲೆಯಲ್ಲಿ ಹೆಚ್ಚು ಸಂಚಾರ ಮಾಡದೇ ಇರುವಂತೆ ಪೊಲೀಸ್ ವಾಹನದಲ್ಲಿ ಮೈಕ್ ಮೂಲಕ ಸೂಚನೆ ನೀಡುತ್ತಿದ್ದಾರೆ.

ದಿನಸಿ ಸಾಮಾನುಗಳ ಖರೀದಿ ಮಾಡಿ ಬೇಗ ಮನೆ ಸೇರುವಂತೆ ಹಾಗೂ ಜಿಲ್ಲಾಧಿಕಾರಿ ಆದೇಶ ಆದೇಶ ನೀಡಿದ್ದಾರೆ. ಪೊಲೀಸರು ಬ್ಯಾರಿಕೇಟ್ ಹಾಕಿ ಸಂಚಾರವಿರುವ ವಾಹನಗಳನ್ನು ಮನೆಗೆ ಕಳುಹಿಸುತ್ತಿದ್ಧಾರೆ.

No Comments

Leave A Comment