Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಇಟಲಿಯಲ್ಲಿ ಮುಂದುವರೆದ ಕೊರೋನಾ ರೌದ್ರನರ್ತನ: ಒಂದೇ ದಿನಕ್ಕೆ 647 ಮಂದಿ ಬಲಿ, ಸಾವಿನ ಸಂಖ್ಯೆ 4,000ಕ್ಕೆ ಏರಿಕೆ

ರೋಮ್: ಇಟಲಿಯಲ್ಲಿ ಮಹಾಮಾರಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 647 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 4000ಕ್ಕೆ ಏರಿಕೆಯಾಗಿದೆ.

ಎಷ್ಟು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂಬುದರ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿ ಇಲ್ಲ. ವೈರಸ್ ಇರುವ ಹಲವಾರು ಜನರು ರಸ್ತೆಗಳಲ್ಲಿ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ಇದರಿಂದ ಇತರರಿಗೂ ಸೋಂಕು ತಗುಲುವಂತೆ ಮಾಡುತ್ತಿದ್ದಾರೆಂದು ಸ್ಥಳೀಯ ಆಸ್ಪತ್ರೆಯೊಂದು ಹೇಳಿದೆ.

ಕಳೆದ ಮೂರು ದಿನಗಳಿಂದ ಇಟಲಿಯಲ್ಲಿ ಬರೋಬ್ಬರಿ 1,500 ಮಂದಿ ಬಲಿಯಾಗಿದ್ದು,  ಇದರಂತೆ ವೈರಸ್’ಗೆ ಈವರೆಗೂ 4000 ಮಂದಿ ಬಲಿಯಾಗಿದ್ದಾರೆ. ಅಲ್ಲದೆ. ಶುಕ್ರವಾರ ಒಟ್ಟು 6,000 ಮಂದಿಯಲ್ಲಿ ಹೊಸದಾಗಿ ವೈರಸ್ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ರಾಜಸ್ತಾನದ ಜೈಪುರದಲ್ಲಿ ಕೊರೋನಾದಿಂದ ಗುಣಮುಖರಾಗಿದ್ದ ಇಟಲಿಯ 69 ವರ್ಷದ ವೃದ್ದರೊಬ್ಬರು ತೀವ್ರ ಹೃದಯ ಸ್ಥಂಭನದಿಂದಾಗಿ ಮೃತಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

No Comments

Leave A Comment