Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಪ್ರಧಾನಿ ಜನತಾ ಕರ್ಫ್ಯೂ ಕರೆಗೆ ಭರ್ಜರಿ ಬೆಂಬಲ; ಬೆಂಗಳೂರಲ್ಲಿ ಮೆಟ್ರೋ ಸಂಚಾರ ಬಂದ್

ನವದೆಹಲಿ/ಬೆಂಗಳೂರು: ಕೊರೊನಾ ವೈರಸ್ ಮಹಾಮಾರಿ ಭೀತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜನತಾ ಕರ್ಫ್ಯೂಗೆ ನೀಡಿದ ಕರೆಗೆ ಎಲ್ಲೆಡೆ ಭರ್ಜರಿ ಬೆಂಬಲ ವ್ಯಕ್ತವಾಗತೊಡಗಿದೆ.

ನಾನು ದೇಶದ ಪ್ರತಿಯೊಬ್ಬ ಪ್ರಜೆಯಿಂದ ಮತ್ತೊಂದು ಬೆಂಬಲದ ನಿರೀಕ್ಷೆಯಲ್ಲಿದ್ದೇನೆ. ಇದೊಂದು ಜನತಾ ಕರ್ಫ್ಯೂ..ಇದು ಜನರೇ ಸ್ವಯಂ ಆಗಿ ವಿಧಿಸಿಕೊಳ್ಳುವ ಕರ್ಫ್ಯೂ. ಎಲ್ಲರೂ ಮನೆಯಲ್ಲೇ ಇರುವ ಮೂಲಕ ಕೊರೊನಾ-19 ಸೋಂಕು ಮಾರಿ ತಡೆಗೆ ಬೆಂಬಲ ನೀಡಬೇಕು ಎಂದು ಪ್ರಧಾನಿ ವಿನಂತಿಸಿಕೊಂಡಿದ್ದರು.

ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ಗಂಟೆವರೆಗೆ ಮನೆಯಿಂದ ಹೊರಬರದಂತೆ ಪ್ರಧಾನಿ ಗುರುವಾರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಹೋಟೆಲ್ ಮಾಲೀಕರ ಸಂಘ, ಉಬರ್, ಓಲಾ ಕ್ಯಾಬ್ ಸಂಘಟನೆ ಸೇರಿದಂತೆ ಇಂದಿರಾ ಕ್ಯಾಂಟೀನ್ ಬಂದ್ ಮಾಡುವುದಾಗಿ ತಿಳಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿವೆ.

ಬೆಂಗಳೂರಿನಲ್ಲಿ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳು ಈಗಾಗಲೇ ಬಂದ್ ಆಗಿದ್ದು, ಭಾನುವಾರ ಮೆಟ್ರೋ ಸಂಚಾರ ಕೂಡಾ ಬಂದ್ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment