Log In
BREAKING NEWS >
ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ಉಪ್ಪಿನಂಗಡಿ: 13 ಪ್ರಕರಣ-ಕುಖ್ಯಾತ ಕಳ್ಳನ ಬಂಧನ,18 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಉಪ್ಪಿನಂಗಡಿ: ಸುಮಾರು 13 ಪ್ರಕರಣಗಳಲ್ಲಿ ಬೇಕಾಗಿದ್ದ ಚಿಕ್ಕಮಗಳೂರು ಶಂಕರಪುರ ನಿವಾಸಿ ಕುಖ್ಯಾತ ಕಳ್ಳ ಶೌಕತ್ ಅಲಿ(56)ಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಗ್ರಾಮಾಂತರ ವೃತ್ತ ರವರ ನೇತೃತ್ವದ ಅಪರಾಧ ಪತ್ತೆ ದಳ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರ ಅಪರಾಧ ಪತ್ತೆ ದಳವು ಈತನನ್ನು ಉಪ್ಪಿನಂಗಡಿ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಎಂಬಲ್ಲಿ ಬಂಧಿಸಿದ್ದಾರೆ.

ಈತ ಉಪ್ಪಿನಂಗಡಿ ಪೊಲೀಸ್ ಠಾಣಾ , ಅಧರ್ಶನಗರ, ನೆಕ್ಕಿಲಾಡಿ, ಕಲ್ಲೇರಿ , ಕೆಂಪಿ ಮಜಲು , ಪುತ್ತೂರು ನಗರ ಠಾಣಾ ಸರಹದ್ದಿನ ಅಜೇಯ ನಗರ, ಮುರ , ಬನ್ನೂರು ಹಾರಾಡಿ , ಕೋಡಿಂಬಾಡಿ, ಅರ್.ಟಿ ಓ ಬಳಿಯ ಜೈನರಗುರಿ , ಸಾಲ್ಮರ, ದಾರಂದಕುಕ್ಕು , ಬಂಟ್ವಾಳ ನಗರ ಠಾಣಾ ಸರಹದ್ದಿನ ಕಲ್ಲಡ್ಕ ಮೊದಲಾದ ಸ್ಥಳಗಳಲ್ಲಿ ಬೀಗ ಹಾಕಿದ ಮನೆಗಳಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

ಚಿಕ್ಕಮಂಗಳೂರು ಮೂಲದ ಈತ ಪ್ರಸ್ತುತ ಬಂಟ್ವಾಳ ಮಾಣಿ ಗ್ರಾಮದ ಅಳಿರಾ ಮನೆಯಲ್ಲಿ ವಾಸ್ತವ್ಯ ಹೂಡಿದ್ದ. ಬಂಧಿತ ಆರೋಪಿಯಿಂದ ಸುಮಾರು 18 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಭರಣಗಳನ್ನು ಸ್ವಾಧೀನಪಡಿಸಲಾಗಿದೆ.

No Comments

Leave A Comment