Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಕೊರೊನಾ ವೈರಸ್ ಎಫೆಕ್ಟ್; ಐಪಿಎಲ್ ಎ.15ಕ್ಕೆ ಮುಂದೂಡಿಕೆ

ಮುಂಬಯಿ:ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಎಪ್ರಿಲ್ 15ಕ್ಕೆ ಮುಂದೂಡಲಾಗಿದೆ.

ಈ ಬಗ್ಗೆ ಮೂಲಗಳಿಂದ ವರದಿಗಳು ಬಂದಿದ್ದು, ಆವೃತ್ತಿಯು ಎಪ್ರಿಲ್ ಮಧ್ಯಂತರ ಅವಧಿಯಲ್ಲಿ ಆರಂಭವಾಗಲಿದೆ. ಈ ಬಗ್ಗೆ ಮಾರ್ಚ್ 14 ಶನಿವಾರದಂದು ಸೇರಲಿರುವ ಬಿಸಿಸಿಐ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ.

ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿ ಐಪಿಎಲ್ ಸೇರಿದಂತೆ ಎಲ್ಲ ಕ್ರೀಡಾಕೂಟಗಳ ಆಯೋಜನೆಗೆ ದಿಲ್ಲಿ ಸರಕಾರ ನಿಷೇಧ ಹೇರಿದೆ. ಹಾಗಾಗಿ ನಿಗದಿತ ವೇಳಾಪಟ್ಟಿಯಂತೆ ಐಪಿಎಲ್ ಆಯೋಜಿಸುವುದು ಬಿಸಿಸಿಐ ಪಾಲಿಗೆ ಕಷ್ಟಕರವೆನಿಸಿದೆ.

ಈ ಮೊದಲು ಐಪಿಎಲ್ ಟೂರ್ನಿಯನ್ನು ಮುಚ್ಚಿದ ಕ್ರೀಡಾಂಗಣದೊಳಗೆ ಆಯೋಜಿಸುವಂತೆ ಕೇಂದ್ರ ಸರಕಾರ ಸಲಹೆ ಮಾಡಿತ್ತು.

No Comments

Leave A Comment