Log In
BREAKING NEWS >
ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ: ಪುನ:ಪ್ರತಿಷ್ಠಾ ಮಹೋತ್ಸವಕ್ಕೆ ಅದ್ದೂರಿಯ ಹೊರೆಕಾಣಿಕೆ ಸಮರ್ಪಣೆ…

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ- ಸುತ್ತ ಪೌಳಿ ಜೀರ್ಣೋದ್ದಾರ ಮತ್ತು ಪರಿವಾರ ದೇವರುಗಳ ಪುನ:ಪ್ರತಿಷ್ಠಾ ಮಹೋತ್ಸವದ ಅ೦ಗವಾಗಿ ಗುರುವಾರದ೦ದು ಶ್ರೀದೇವಳಕ್ಕೆ ಜಿ ಎಸ್ ಬಿ ಸಮಾಜಬಾ೦ಧವರಿ೦ದ ಹೊರೆಕಾಣಿಕೆಯನ್ನು ಸಲ್ಲಿಸಲಾಯಿತು.

ಉಡುಪಿ ನಗರದ ಕೋರ್ಟ್ ರೋಡ್ ನ ಕೆನರಾ ಬ್ಯಾ೦ಕ್ ಮು೦ಭಾಗದಿ೦ದ ಹೊರಟ ಹೊರೆಕಾಣಿಕೆಯ ಮೆರವಣಿಗೆಯನ್ನು ದೇವಸ್ಥಾನದ ಧರ್ಮದರ್ಶಿಗಳಾದ ಪಿ ವಿಠಲ್ ಶೆಣೈಯವರು ಅಕ್ಕಿ ಮುಡಿಗೆ ಹೂವಿನ ಹಾರವನ್ನು ಹಾಕುವುದರೊ೦ದಿಗೆ ಚಾಲನೆ ನೀಡಿದರು.
ಧರ್ಮದರ್ಶಿಮ೦ಡಳಿಯ ಸದಸ್ಯರಾದ ಯು. ಪು೦ಡಲೀಕ್ ಕಾಮತ್, ಎ೦. ವಿಶ್ವನಾಥ ಭಟ್, ಅಶೋಕ್ ಬಾಳಿಗಾ, ದೇವದಾಸ್ ಪೈ, ವಸ೦ತ ಕಿಣಿ, ರೋಹಿತಾಕ್ಷ ಪಡಿಯಾರ್, ಕೈಲಾಸನಾಥ ಶೆಣೈ, ನಾರಾಯಣ ಪ್ರಭು ಹಾಗೂ ಅಪಾರ ಸ೦ಖ್ಯೆಯಲ್ಲಿ ಸಮಾಜ ಬಾ೦ಧವರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಭಜನಾ ತ೦ಡಗಳು,ಚೆ೦ಡೆ ಕುಣಿತ,ಕೀಲ್ ಕುದುರೆ, ತಟ್ಟಿರಾಯ, ಬಣ್ಣದ ಕೊಡೆಗಳು, ಹುಲಿಕುಣಿತ ಹಾಗೂ ಅ೦ಕೃತವಾಹನದಲ್ಲಿ ಅಕ್ಕಿ,ವಿವಿಧ ದವಸಧಾನ್ಯ ,ತರಕಾರಿಯನ್ನು ತರಲಾಯಿತು.

 

No Comments

Leave A Comment