Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಉಡುಪಿಯ ಖ್ಯಾತ ಉದ್ಯಮಿ, ರಾಜಕೀಯ ಮುಖ೦ಡ, ಸಹಕಾರಿ ಧುರೀಣ ಕೃಷ್ಣರಾಜ (ಪಟಾಕಿ)ಸರಳಾಯ ನಿಧನ

ಉಡುಪಿ: ಕಾಂಗ್ರೆಸಿನ ಹಿರಿಯ ಮುಖಂಡ, ಹಿರಿಯ ಸಹಕಾರಿ ಧುರೀಣ, ಉಡುಪಿಯ ಪಟಾಕಿ ಉದ್ಯಮಿ ಕೆ.ಕೃಷ್ಣರಾಜ್ ಸರಳಾಯ(87) ಇಂದು ಮಧ್ಯಾಹ್ನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪಣಿಯಾಡಿಯ ಮನೆಯಲ್ಲಿ ಒಬ್ಬರೇ ವಾಸವಾಗಿದ್ದ ಸರಳಾಯರು ಮಧ್ಯಾಹ್ನ ಅವರ ಮನೆಯ ಪಕ್ಕದ ಬಾವಿಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆರೆ ಮನೆಯವರು ಬಾವಿಯ ಬಳಿ ಏನೋ ಶಬ್ದ ಕೇಳಿ ಬಂದದ್ದನ್ನು ನೋಡಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.

ಸರಳಾಯರ ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಆಸ್ಟ್ರೇಲಿಯಾ ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದ ಇವರು ಇದೇ ಕೊರಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಸರಳಾಯರು 76 ಬಡಗಬೆಟ್ಟು ಬೈಲೂರು ಇದರ ಮಂಡಲ ಪ್ರಧಾನರಾಗಿದ್ದರು. ಆಸ್ಕರ್ ಫೆರ್ನಾ೦ಡೀಸ್ ರವರ ಆತ್ಮೀಯರಾಗಿದ್ದರು.ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಹಕಾರಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ ಇವರು ಕೊರಂಗ್ರಪಾಡಿ ವ್ಯವಸಾಯಿಕ ಸಹಕಾರಿ ಸಂಘ, ಉಡುಪಿ ಟೌನ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಲ್ಸಂಕ ಮತ್ತು ರಥಬೀದಿಯಲ್ಲಿ ಹಲವಾರು ವರ್ಷಗಳಿ೦ದ ಪಟಾಕಿ ಮಾರಾಟದ ವ್ಯವಹಾರ ನಡೆಸುತ್ತಿದ್ದರು.

ಮೃತರ ನಿಧನಕ್ಕೆ ಉಡುಪಿ ರಥಬೀದಿಯ ವ್ಯಾಪರಸ್ಥರು, ರಾಜಕೀಯ ಮುಖ೦ಡರಾದ ಪ್ರಮೋದ್ ಮಧ್ವರಾಜ್ ,ವಿನಯಕುಮಾರ್ ಸೂರಕೆ,ಯು ಆರ್ ಸಭಾಪತಿ,ಮನೋರಮಾ ಮಧ್ವರಾಜ್ , ಆಸ್ಕರ್ ಫೆರ್ನಾ೦ಡೀಸ್, ರಘುಪತಿ ಭಟ್, ಜಯಕರ ಶೆಟ್ಟಿ ಇ೦ದ್ರಾಳಿ,ಎಸ್ ಸಿ ಡಿ ಸಿ ಸಿಯ ಡಾ.ರಾಜೇ೦ದ್ರ ಕುಮಾರ್, ಉಡುಪಿ ಶಿವಳ್ಳಿ ಬ್ರಾಹ್ಮಣ ಸಮಾಜ ಬಾ೦ಧವರು,ಯುವ ಬ್ರಾಹ್ಮಣ ಸಮಾಜದ ಸ೦ಘಟನೆಯವರು, ಉಡುಪಿ ಟೌನ್ ಕೋ ಅಪರೇಟಿವ್ ಸೊಸೈಟಿಯ ಆಡಳಿತ ಮ೦ಡಳಿಯ ಸರ್ವ ಸದಸ್ಯರು ಸ೦ತಾಪ ಸೂಚಿಸಿದ್ದಾರೆ.

No Comments

Leave A Comment