Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಪಾಕಿಸ್ಥಾನ: ಬಸ್ ಮತ್ತು ರೈಲು ನಡುವೆ ಭೀಕರ ಅಪಘಾತ, 20ಕ್ಕಿಂತ ಹೆಚ್ಚು ಮಂದಿ ದುರ್ಮರಣ

ಕರಾಚಿ: ಪಾಕಿಸ್ಥಾನದ ದಕ್ಷಿಣ ಸಿಂಧ್ ಪ್ರಾಂತ್ಯದ ರೋಹ್ರಿ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ರೈಲು ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ 20ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ ಎಂದು ಎಎನ್ ಐ ವರದಿ ತಿಳಿಸಿದೆ.

ಘಟನೆಯಲ್ಲಿ 20ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ 60 ಜನರನ್ನು ರೋಹ್ರಿ ಹಾಗೂ ಸುಕ್ಕೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸುಕ್ಕೂರ್ ಪೊಲೀಸ್ ಆಯುಕ್ತ ಶಫೀಕ್ ಆಹಮ್ಮದ್ ತಿಳಿಸಿದ್ದಾರೆ.

ರೋಹ್ರಿ ರೈಲ್ವೆ ನಿಲ್ದಾಣದ ಸಮೀಪವಿರುವ ಕಂಧ್ರಾ ರೈಲ್ವೆ ಕ್ರಾಸಿಂಗ್‌ನಲ್ಲಿ ರಾವಲ್ಪಿಂಡಿಯಿಂದ ಕರಾಚಿ ಕಡೆಗೆ ಬರುತ್ತಿದ್ದ ಪಾಕಿಸ್ತಾನ್ ಎಕ್ಸ್‌ಪ್ರೆಸ್ ರೈಲು, ಬಸ್‌ ಗೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿ 50 ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರು. ಈ ಬಸ್ ಸುಕ್ಕೂರ್ ನಿಂದ ಪಂಜಾಬ್ ಕಡೆಗೆ ತೆರಳುತ್ತಿತ್ತು. ರೈಲು ಗುದ್ದಿದ ರಭಸಕ್ಕೆ ಬಸ್ ಮೂರು ಭಾಗವಾಗಿ ಚದುರಿಹೋಗಿದೆ. ಇದೊಂದು ಭೀಕರ ಅಪಘಾತ ಎಂದು ಪೊಲೀಸ್ ಅಧಿಕಾರಿ ಜಮೀಲ್ ಆಹಮ್ಮದ್ ತಿಳಿಸಿದ್ದಾರೆ.

No Comments

Leave A Comment