Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಶೇರು ಮಾರುಕಟ್ಟೆಗೆ ಕೊರೊನಾ ದಾಳಿ: 5 ನಿಮಿಷದಲ್ಲಿ 5 ಲಕ್ಷ ಕೋಟಿ ನಷ್ಟ

ಮುಂಬೈ: ಚೀನಾ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಮರಣ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಎಫೆಕ್ಟ್ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದ್ದು, ಕೇವಲ 5 ನಿಮಿಷಗಳ ಅಂತರದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ.

ಚೀನಾ, ದಕ್ಷಿಣ ಕೊರಿಯಾ, ಇಟಲಿ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಉಂಟಾಗಿರುವ ಕೊರೋನಾ ವೈರಸ್ ಭೀತಿ ಉತ್ಪಾದನಾ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದರ ದುಷ್ಪರಿಣಾಮ ಇದೀಗ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದೆ. ಇಂದು ಷೇರುಮಾರುಕಟ್ಟೆ ವಹಿವಾಟಿನ ವಾರದ ಕೊನೆಯ ದಿನವಾಗಿದ್ದು, ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 1100 ಅಂಕಗಳ ಕಳೆದುಕೊಂಡಿತು. ಆ ಮೂಲಕ 38,661.81ಅಂಕಗಳಿಗೆ ಸೆನ್ಸೆಕ್ಸ್ ಕುಸಿಯಿತು. ಮಾರುಕಟ್ಟೆಯಲ್ಲಿ ಈ ದಿಢೀರ್ ನಕಾರಾತ್ಮಕ ಬೆಳವಣಿಗೆಯಿಂದಾಗಿ ಹೂಡಿಕೆದಾರರು ಬರೊಬ್ಬರಿ 5 ಲಕ್ಷ ಕೋಟಿ ರೂಗಳ ನಷ್ಟ ಅನುಭವಿಸುವಂತಾಗಿದೆ.

ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್, ಎಚ್‌ಸಿಎಲ್ ಟೆಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗಳು ಭಾರಿ ನಷ್ಠ ಅನುಭವಿಸಿದ್ದು, ಈ ಸಂಸ್ಥೆಗಳ ಷೇರುಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.

ಇನ್ನು ಕೊರೋನಾ ವೈರಸ್ ದಾಳಿಯಿಂದಾಗಿ ಗಂಭೀರ ಪರಿಣಾಮ ಎದುರಿಸುತ್ತಿರುವ ಚೀನಾದಲ್ಲಿ ನಿನ್ನೆ ಒಂದೇ ದಿನ ಮತ್ತೆ 44 ಮಂದಿ ಮೃತರಾಗಿದ್ದಾರೆ. ಆ ಮೂಲಕ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2,788ಕ್ಕೇರಿದೆ.

No Comments

Leave A Comment