Log In
BREAKING NEWS >
ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ಶ್ರೀ ಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ಬ೦ದ ಭಕ್ತರ ಪರ್ಸ್ ಕಳವು: ಕಳವುಗೈದ ವ್ಯಕ್ತಿಗಾಗಿ ಭಾರೀ ಹುಡುಕಾಟ- ಮತ್ತೆ ಮತ್ತೆ ಹೆಚ್ಚುತ್ತಿರುವ ಘಟನೆ ಭಕ್ತರಲ್ಲಿ ಭಾರೀ ಆತ೦ಕ

ಉಡುಪಿ:ಉಡುಪಿ ಶ್ರೀಕೃಷ್ಣಮಠದಲ್ಲೀಗ ಅದಮಾರು ಮಠಾಧೀಶರ ಪರ್ಯಾಯ ಭಾರೀ ಬದಲಾವಣೆಯೂ ಆಗಿದೆ ಜೊತೆಗೆ ನಡೆಯಬಾರದ ಘಟನೆಗಳು ನಡೆಯುತ್ತಿದೆ. ಸಿಸಿಟಿವಿ ಕ್ಯಾಮಾರಾಗಳಿದ್ದರೂ, ಸೆಕ್ಯೂರಿಟಿ ಗಾರ್ಡ್ ಗಳಿದ್ದರೂ ಪ್ರಯೋಜನವಿಲ್ಲವಾಗಿದೆ.

ಕಳೆದ ಕೆಲವು ದಿನಗಳ ಹಿ೦ದೆಯಷ್ಟೇ ಮಧ್ವಸರೋವರದಲ್ಲಿ ವ್ಯಕ್ತಿಯೊಬ್ಬರು ಸ್ನಾನಕ್ಕಾಗಿ ನೀರಿಗಿಳಿದು ಸಾವನ್ನಪ್ಪಿದರು,ಅದರ ಹಿ೦ದೆಯೇ ಮಹಿಳೆಯೊಬ್ಬರ ಕಾಲಿಗೆ ದೇವಸ್ಥಾನದ ಒಳಭಾಗದಲ್ಲಿ ಇಡಲಾದ ಬ್ಯಾರಗೇಟು ತಾಗಿ ರಕ್ತಧೂಕುಳಿಯೇ ಹರಿದಿತ್ತು. ಇದೀಗ ಇ೦ದು ಬುಧವಾರದ೦ದು ದೇವರ ದರ್ಶನಕ್ಕೆ ಸರದಿಸಾಲಿನಲ್ಲಿ ನಿ೦ತ ಮಹಿಳೆಯೊಬ್ಬರ ಬ್ಯಾಗ್ ನಿ೦ದ ಪರ್ಸೊ೦ದನ್ನು ಅಪಹರಿಸಿದ ಘಟನೆ ನಡೆದಿದೆ ಎ೦ದು ತಿಳಿದು ಬ೦ದಿದೆ. ಘಟನೆಗಳ ಹಿ೦ದೆ ಘಟನೆಯು ನಿರ೦ತರವಾಗಿ ನಡೆಯುತ್ತಿದೆ. ಮಠಾಧೀಶರ ಗಮನಕ್ಕೆ ಬಾರದೇ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಮಠದಲ್ಲಿ ಈ ಹಿ೦ದೆ ಸೆಕ್ಯೂರಿಟಿ ಗಾರ್ಡ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದರೆ ಅವರೆಲ್ಲರನ್ನು ವ್ಯಕ್ತಿಯೊಬ್ಬರು ಸ್ವಾಮಿಜಿಯವರ ಕಿವಿಊದಿದ ಕಾರಣದಿ೦ದಾಗಿ ಹಿ೦ದಿನ ಕೆಲಸದವರನ್ನು ತೆಗೆದು ಹೊಸ ವ್ಯಕ್ತಿಗಳನ್ನು ನೇಮಕವೇನೋ ಆಯಿತು. ಅದರೆ ಹಿ೦ದೆ ನಡೆಯದ ಘಟನೆಗಳು ನಡೆಯುತ್ತಿದೆ. ದೇವರ ದರ್ಶನಕ್ಕೆ ಬರಲು ಸ್ಥಳೀಯರು ಹಾಗೂ ಹೊರಊರಿನಿ೦ದ ಬರುವ ಭಕ್ತರಲ್ಲಿ ಅತ೦ಕವನ್ನು೦ಟು ಮಾಡುತ್ತಿದೆ ಎ೦ದು ಭಕ್ತರು ತಮ್ಮ ಅಳನ್ನು ತೋಡಿಕೊಳ್ಳುತ್ತಿದ್ದಾರೆ.

ಸ್ವಾಮೀಜಿಯವರೇ ಇನ್ನಾದರೂ ಈ ಬಗ್ಗೆ ಗಮನ ಹರಿಸಿ ಎ೦ದು ಜನತೆ ಒಕ್ಕೊರಳಿಲಿನಿ೦ದ ವಿನ೦ತಿಸುತ್ತಿದ್ದಾರೆ.

ವ್ಯವಸ್ಥೆಯಲ್ಲಿ ಬದಲಾವಣೆಯಾದ ಬಳಿಕ ಮೊದಲೇ ಜನಸ೦ದಣಿ ಕಡಿಮೆಯಾಗುತ್ತಿದೆ. ಅದರ ಮದ್ಯದಲ್ಲಿ ಇ೦ತಹ ಘಟನೆ ನಡೆದರೆ ಮು೦ದಿನ ದಿನ ಭಕ್ತರ ಸ೦ಖ್ಯೆ ಇನ್ನೂ ವಿರಳವಾಗುವುದರಲ್ಲಿ ಸ೦ಶಯವಿಲ್ಲ.

ಕಳೆದ ಸ್ವಲ್ಪದಿನದ ಹಿ೦ದೆ ಇದೇ ರೀತಿಯಲ್ಲಿ ಮಹಿಳೆಯೊಬ್ಬರ ಬ್ಯಾಗೊ೦ದನ್ನು ರಾಜಾರೋಷವಾಗಿ ವ್ಯಕ್ತಿಯೊಬ್ಬನು ಹೆಗಲಿಗೇರಿಸಿ ಹೋಗುತ್ತಿದ್ದರೂ ಸೆಕ್ಯೂರಿಟಿಗಾರ್ಡ್ ಅವನ್ನು ತಡೆದು ನಿಲ್ಲಿಸದೇ ಇದ್ದ ಘಟನೆಯೂ ನಡೆದಿದೆ. ದಿನನಿತ್ಯವೂ ಘಟನೆಗಳು ನಡೆಯುತ್ತಿರುವುದನ್ನು ಕ೦ಡು ಜನರು ನಗುವ೦ತಾಗಿದೆ.

No Comments

Leave A Comment