Log In
BREAKING NEWS >
ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ....

ಹಳಿ ಕಾಮಗಾರಿ: ರೈಲು ಸಂಚಾರದಲ್ಲಿ ವ್ಯತ್ಯಯ

ಮಂಗಳೂರು: ಮಂಗಳೂರು ಜಂಕ್ಷನ್‌-ಪಣಂಬೂರು ರೈಲುಮಾರ್ಗದಲ್ಲಿ ಫೆ. 19ರಿಂದ 28ರ ವರೆಗೆ ರೈಲು ಹಳಿ ದ್ವಿಗುಣ ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ರೈಲು ನಂ.56647/56646 ಮಂಗಳೂರು ಸೆಂಟ್ರಲ್‌-ಸುಬ್ರಹ್ಮಣ್ಯ ರೋಡ್‌ ಪ್ಯಾಸೆಂಜರ್‌ ರೈಲಿನ ಸಂಚಾರ ಫೆ. 21, ಫೆ. 23 ಹಾಗೂ ಫೆ. 24ರಿಂದ 28ರ ವರೆಗೆ ರದ್ದುಗೊಳ್ಳಲಿದೆ.
ರೈಲು ನಂ. 16575 ಯಶವಂತ ಪುರ-ಮಂಗಳೂರು ಜಂಕ್ಷನ್‌ನ ಸಂಚಾರವನ್ನು ಫೆ. 23, ಫೆ. 25 ಹಾಗೂ ಫೆ. 27ರಂದು ಬಂಟ್ವಾಳ-ಮಂಗಳೂರು ಜಂಕ್ಷನ್‌ ಮಧ್ಯೆ ರದ್ದುಗೊಳಿಸಲಾಗಿದೆ.

ರೈಲು ನಂ. 07328 ಮಂಗಳೂರು ಜಂಕ್ಷನ್‌- ವಿಜಯಪುರ ಎಕ್ಸ್‌ಪ್ರೆಸ್‌ ರೈಲ್‌ನ ಸಂಚಾರದ ಸಮಯದಲ್ಲಿ ಫೆ. 20, ಫೆ. 21, ಫೆ. 23, ಫೆ. 24, ಫೆ. 25, ಫೆ. 26 ಹಾಗೂ ಫೆ. 27ರಂದು ಅನುಕ್ರಮವಾಗಿ 120 ನಿಮಿಷ, 150 ನಿಮಿಷ, 90 ನಿಮಿಷ, 110 ನಿಮಷ, 90 ನಿಮಿಷ, 30 ನಿಮಷ ಹಾಗೂ 90 ನಿಮಿಷಗಳ ಮರುಹೊಂದಾಣಿಕೆ ಮಾಡಲಾಗಿದೆ.

ರೈಲು ನಂ.16515 ಯಶವಂತಪುರ – ಕಾರವಾರ ಎಕ್ಸ್‌ಪ್ರೆಸ್‌ ರೈಲ್‌ನ ಸಂಚಾರ ಸಮಯದಲ್ಲಿ ಫೆ. 21ರಂದು 120 ನಿಮಿಷ ಮರುಹೊಂದಾಣಿಕೆ ಮಾಡಲಾಗಿದೆ.

ರೈಲು ನಂ. 56645 ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು ಎಕ್ಸ್‌ ಪ್ರಸ್‌ ಸಂಚಾರದಲ್ಲಿ 45 ನಿಮಿಷ ಮರು ಹೊಂದಾಣಿಕೆ ಮಾಡಲಾಗಿದೆ.

ರೈಲು ನಂ. 16586 ಮಂಗಳೂರು ಸೆಂಟ್ರಲ್‌- ಯಶವಂತಪುರ ಎಕ್ಸ್‌ಪ್ರೆಸ್‌ನ ಸಂಚಾರ ಸಮಯದಲ್ಲಿ ಫೆ. 21ರಂದು ನಿಮಿಷ ಮರುಹೊಂದಾಣಿಕೆ ಮಾಡಲಾಗಿದೆ.

ರೈಲು ನಂ. 16576 ಮಂಗಳೂರು ಜಂಕ್ಷನ್‌- ಯಶವಂತಪುರ ಎಕ್ಸ್‌ಪ್ರೆಸ್‌ಸಂಚಾರದಲ್ಲಿ ಫೆ. 28ರಂದು 120 ನಿಮಿಷ ಮರುಹೊಂದಾಣಿಕೆ ಮಾಡಲಾಗಿದೆ. ನಂ.56645 ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು ಎಕ್ಸ್‌ಪ್ರೆಸ್‌ ಸಂಚಾರದಲ್ಲಿ ಫೆ. 24, ಫೆ. 25, ಫೆ. 27ರಂದು ಕ್ರಮವಾಗಿ 25 ನಿಮಿಷ, 15 ನಿಮಿಷ ಹಾಗೂ 15 ನಿಮಿಷ ವ್ಯತ್ಯಯವಾಗಲಿದೆ.

ರೈಲು ನಂ. 16515 ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್‌ ಸಂಚಾರ ಸಮಯದಲ್ಲಿ ಫೆ. 24ರಂದು 90 ನಿಮಿಷ ವ್ಯತ್ಯಯವಾಗಲಿದೆ.

ರೈಲು ನಂ. 07327 ವಿಜಯಪುರ – ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲ್‌ನ ಸಂಚಾರದಲ್ಲಿ ಫೆ. 27ರಂದು 60 ನಿಮಿಷ ವ್ಯತ್ಯಯವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟನೆ ತಿಳಿಸಿದೆ.

ಉತ್ತರ ರೈಲ್ವೇ ಫರಿದಾಬಾದ್‌ ನಿಲ್ದಾಣದಲ್ಲಿ ಕಾಮಗಾರಿ
ಉತ್ತರ ರೈಲ್ವೇಯ ಫರಿದಾಬಾದ್‌ ನಿಲ್ದಾಣದಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ರೈಲು ನಂ. 12617 ಎರ್ನಾಕುಳಂ ಜಂಕ್ಷನ್‌- ನಿಜಾ ಮುದ್ದೀನ್‌ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್‌ ಸಂಚಾರವನ್ನು ಫೆ. 23, 24 ಮತ್ತು 25ರಂದು ರದ್ದುಪಡಿಸಲಾಗಿದೆ.

ರೈಲು ನಂ. 12618 ನಿಜಾಮುದ್ದೀನ್‌- ಎರ್ನಾಕುಳಂ ಜಂಕ್ಷನ್‌ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್‌ ಸಂಚಾರವನ್ನು ಫೆ. 26, 27 ಮತ್ತು 28ರಂದು ರದ್ದುಗೊಳಿಸಲಾಗಿದೆ.

ರೈಲು ನಂ. 12218 ಚಂಡೀಘರ್‌- ಕೊಚ್ಚುವೇಲಿ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ಫೆ. 26ರಂದು ರದ್ದುಗೊಂಡಿದೆ.

ರೈಲು ನಂ. 12217 ಕೊಚ್ಚುವೇಲಿ-ಚಂಡೀಘರ್‌ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ಸಂಚಾರ ಫೆ. 29ರಂದು ರದ್ದುಪಡಿಸಲಾಗಿದೆ. ರೈಲು ನಂ. 22659 ಕೊಚ್ಚುವೇಲಿ- ಡೆಹರಾಡೂನ್‌ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಫೆ. 28ರಂದು ಹಾಗ ರೈಲು ನಂ. 22660 ಡೆಹರಾಡೂನ್‌- ಕೊಚ್ಚುವೇಲಿ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಮಾ. 1ರಂದು ರದ್ದುಗೊಳಿಸಲಾಗಿದೆ.

ರೈಲು ನಂ. 12779 ವಾಸ್ಕೋ ಡಾ ಗಾಮ- ನಿಜಾಮುದ್ದೀನ್‌ ಗೋವಾ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಫೆ. 24, 25 ಮತ್ತು 26ರ ರದ್ದುಪಡಿಸಲಾಗಿದೆ. ರೈಲು ನಂ. 12780 ನಿಜಾಮುದ್ದೀನ್‌- ವಾಸ್ಕೋಡ ಗಾಮ ಗೋವಾ ಎಕ್ಸ್‌ಪ್ರೆಸ್‌ ಸಂಚಾರವನ್ನು ಫೆ. 26, 27 ಮತ್ತು 28ರಂದು ರದ್ದುಗೊಳಿಸಲಾಗಿದೆ.

ರೈಲು ನಂ. 12431 ತಿರುವನಂತಪುರ ಸೆಂಟ್ರಲ್‌- ಎಚ್‌. ನಿಜಾಮುದ್ದೀನ್‌ ರಾಜಧಾನಿ ಎಕ್ಸ್‌ಪ್ರೆಸ್‌ನ ಫೆ. 27 ರಂದು ಸಂಚಾರದಲ್ಲಿ ಮರುಹೊಂದಾಣಿಕೆ ಮಾಡಲಾಗಿದ್ದು ಎರಡು ತಾಸು ತಡವಾಗಿ ರಾತ್ರಿ 9.45ಕ್ಕೆ ಹೊರಡಲಿದೆ.

No Comments

Leave A Comment