Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಉಡುಪಿ: ಬಿಜೆಪಿ ಯುವ ಮುಖಂಡ ಶಶಿಕಾಂತ ಶಿವತ್ತಾಯ ನಿಧನ

ಉಡುಪಿ: ಬಿಜೆಪಿ ಯುವ ಮುಖಂಡ ಶೀಂಬ್ರ ಶಶಿಕಾಂತ ಶಿವತ್ತಾಯ ಅಲ್ಪಕಾಲದ ಅಸ್ವಸ್ಥದಿಂದ ಇಂದು ನಸುಕಿನ ಮುಂಜಾನೆ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು.

ನಿವತ್ತ ಮುಖ್ಯೋಪಾಧ್ಯಾಯ ನರಸಿಂಹ ಶಿವತ್ತಾಯರ ಸುಪುತ್ತರಾಗಿದ್ದ ಶ್ರೀಯುತರು ಪೆರಂಪಳ್ಳಿ ಯುವಕ‌ಮಂಡಲ ಹಾಗೂ‌ ನವಚೈತನ್ಯ ಯುವಕ‌ ಮಂಡಲ ಶೀಂಬ್ರ ಇದರ ಅಧ್ಯಕ್ಷರಾಗಿ ಉತ್ತಮ ಸಂಘಟನಾತ್ಮಕ ಕಾರ್ಯ ನಿರ್ವಹಿಸಿದ್ದರು.ಪೆರಂಪಳ್ಳಿ ಬಿಜೆಪಿ ಸ್ಥಾನೀಯ ಸಮಿತಿಯ ಪ್ರಮುಖರಾಗಿ ಸಕ್ರಿಯರಾಗಿದ್ದರು.

ಉಡುಪಿ ಶಾಸಕ ಕೆ. ರಘುಪತಿ ಭಟ್ಟರ ಆಪ್ತ ವಲಯದಲ್ಲಿದ್ದರು. ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲೂ ಆಸಕ್ತಿ ವಹಿಸಿದ್ದ ಶಶಿಕಾಂತ್ ತಾಂಗೋಡು ಸುಬ್ರಹ್ಮಣ್ಯ ದೇವಸ್ಥಾನ ಮಲ್ಲಂಪಳ್ಳಿ ವಿಷ್ಣುಮೂರ್ತಿ ದೇವಸ್ಥಾನ, ಪೆರಂಪಳ್ಳಿ ಎಡ್ಮೇರಿ ಬೊಬ್ಬರ್ಯ ದೈವಸ್ಥಾನ ಮಲ್ಲಂಪಳ್ಳಿ ಬಬ್ಬುಸ್ವಾಮಿ ದೈವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಮತ್ತು ಪೆರಂಪಳ್ಳಿ ಮಹಾಲಿಂಗೇ ಶ್ವರ ಮಹಾಗಣಪತಿ ದೇವಸ್ಥಾನದ ಶೀಂಬ್ರ ವಿಷ್ಣುಮೂರ್ತಿ ಭಜನಾ ಮಂಡಳಿಯ ಯಾವತ್ತೂ ಉತ್ಸವಾದಿ ಪ್ರಕ್ರಿಯೆಗಳಲ್ಲಿ ಉಡುಪಿಯ ಪರ್ಯಾಯೋತ್ಸವಗಳಲ್ಲಿ ತುಂಬು ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಉತ್ತಮ‌ಕ್ರೀಡಾಪಟುವೂ ಆಗಿ ಪೆರಂಪಳ್ಳಿ ಯಲ್ಲಿ ಕ್ರಿಕೆಟ್ ಬ್ಯಾಂಡ್ಮಿಂಟನ್ ವಾಲಿಬಾಲ್ ಪಂದ್ಯಾಟಗಳನ್ನು ಸಂಯೋಜಿಸುವಲ್ಲಿ ಮುಂಚೂಣಿ ವಹಿಸಿದ್ದರು.

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಸದಸ್ಯರಾಗಿದ್ದರು. ಮೃತರು ಅವಿವಾಹಿತರಾಗಿದ್ದು ತಾಯಿ , ಮೂವರು ಸಹೋದರರು ಐವರು ಸಹೋದರಿಯರು ಹಾಗೂ ಅಪಾರ ಮಿತ್ರರು ಬಂಧುಗಳನ್ನು ಅಗಲಿದ್ದಾರೆ.

ಶಶಿಕಾಂತ್ ನಿಧನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ ರಘುಪತಿ ಭಟ್ , ಸಂಸದೆ ಶೋಬಾ ಕರಂದ್ಲಾಜೆ ,ಬಿಜೆಪಿ ಜಿಲ್ಲಾಧ್ಯಕ್ಷ ಕೆ ಸುರೇಶ್ ನಾಯಕ್ ,ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ , ನವಚೈತನ್ಯ ಯುವಕ ಮಂಡಲ , ಪೆರಂಪಳ್ಳಿ ಯುವಕ ಮಂಡಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

No Comments

Leave A Comment