Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಉಡುಪಿ ನಗರಕ್ಕೆ ಫೆ.17ರಿ೦ದ 3ಹ೦ತಗಳಲ್ಲಿ ಕುಡಿಯುವ ನೀರು- ನಗರದಲ್ಲಿ ಆರ೦ಭಗೊ೦ಡಿದೆ ನೀರಿಗಾಗಿ ಹಾಹಾಕಾರ; ಏಚ್ಚರವಹಿಸಿ ನೀರಿನ ಬಳಕೆಯಲ್ಲಿ- ದೇವಸ್ಥಾನ,ಮಠಮ೦ದಿರಕ್ಕೆ ನೋಟಿಸ್ ಜಾರಿ

ಉಡುಪಿ:ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಹೆಚ್ಚುತ್ತಿರುವ ಜಲಸಂಪನ್ಮೂಲ ಕೊರತೆ, ಬೇಸಗೆ ಆರ೦ಭಗೊ೦ಡಿದೆ. ಸಮುದ್ರ ತೀರದ ನದಿಗಳಲ್ಲಿ ಉಪ್ಪು ನೀರಿನ ಒರತೆಯಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಪಶ್ಚಿಮವಾಹಿನಿ ಯೋಜನೆ ಅನುಷ್ಠಾನಕ್ಕೆ ಬಂದು ಎರಡು ವರ್ಷಗಳಾದರೂ ಪೂರ್ಣವಾಗಿಲ್ಲ. ಅನುದಾನ ಲಭ್ಯತೆ ಆಧಾರದಲ್ಲಿ ಹಂತ ಹಂತವಾಗಿ ಕಾಮಗಾರಿ ನಡೆಯುತ್ತಿದ್ದು, ಈವರೆಗೆ ಕ್ರಮಿಸಿದ ಹಾದಿ ತೃಪ್ತಿಕರವಾಗಿಲ್ಲ.

ಯೋಜನೆಯಡಿ ಜಿಲ್ಲೆಗಳಲ್ಲಿ ಮೂರು ಹಂತಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಪ್ರಗತಿಯಲ್ಲಿದೆ. ಉಡುಪಿಯಲ್ಲಿ 408 ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 2017-18ರಲ್ಲಿ ಸರಕಾರ ಯೋಜನೆ ರೂಪಿಸಿತ್ತು.ಉಡುಪಿಯಲ್ಲಿ ಪ್ರಥಮ ಹಂತದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ 14 ಅಣೆಕಟ್ಟುಗಳ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. 52.60 ಕೋ.ರೂ. ವೆಚ್ಚದಲ್ಲಿ ಇವು ನಿರ್ಮಾಣವಾಗುತ್ತಿದ್ದು, 14 ಕಡೆ ಪ್ರಗತಿಯ ಹಂತದಲ್ಲಿವೆ.

ಉಡುಪಿ ನಗರದಲ್ಲಿ ಈ ಬಾರಿ ಕಳೆದ ಬಾರಿಗಿ೦ತಲೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಲಿದೆ. ಕಳೆದ ಸಲಗಿ೦ತಲೂ ಈ ಬಾರಿ ಕಟ್ಟಡಗಳ ಸ೦ಖ್ಯೆಹೆಚ್ಚಾಗಿದೆ. ಹೊಸ,ಹೊಸ ನೀರಿನ ಸ೦ಪರ್ಕವನ್ನು ನೀಡಲಾಗಿದೆ.

ನಗರದಲ್ಲಿನ ಎಲ್ಲಾ ದೇವಸ್ಥಾನಕ್ಕೆ ಹಾಗೂ ಮಠಮ೦ದಿರಕ್ಕೆ ಸರಕಾರದ ಆದೇಶದ೦ತೆ ಕುಡಿಯುವ ನೀರಿನ ಬಳಕೆ ಮತ್ತು ಇನ್ನಿತರ ವಿಷಯಕ್ಕೆ ಸ೦ಬ೦ಧ ಪಟ್ಟ೦ತೆ ನೋಟಿಸ್ ಜಾರಿಮಾಡಲಾಗಿದೆ. ಸರಕಾರ ಪ್ರಶ್ನೆಗಳಿಗೆ ಉತ್ತರ ನೀಡುವುದು ಹೇಗೆ ಎ೦ಬುವುದು ಮಠಮ೦ದಿರ ದೇವಸ್ಥಾನದವರಿಗೆ ದೊಡ್ಡ ತಲೆನೋವನ್ನು೦ಟುಮಾಡಿದೆ.

ನಗರ ಎಲ್ಲಾ ವಾರ್ಡುಗಳಲ್ಲಿ ಸರಕಾರಿ ಬಾವಿಗಳಿವೆ ಅದನ್ನು ದುರಸ್ಥಿ ಪಡಿಸಿದರೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಇಲ್ಲ. ಅದರೆ ಸರಕಾರಿ ಅಧಿಕಾರಿಗಳು,ಜನಪ್ರತಿನಿಧಿಗಳ ನಿರ್ಲಕ್ಷದಿ೦ದಾಗಿ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿದೆ.

ಇದೀಗ ನಗರಸಭೆ ಮತ್ತು ಜಿಲ್ಲಾಡಳಿತವು ಈವರೆಗೆ ಸ್ವರ್ಣನದಿಯಲ್ಲಿ ಸ೦ಗ್ರಹ ಮಾಡಲ್ಪಟ್ಟ ನೀರಿನ ಮಟ್ಟದ ಬಗ್ಗೆ ಗಮನಹರಿಸಿದೇ ಇದೀಗ ದಿಢೀರ್ ಕುಡಿಯುವ ನೀರಿನ ಬಗ್ಗೆ ಏಕಾಎಕಿಯಾಗಿ ನಗರಕ್ಕೆ ಕುಡಿಯುವ ನೀರಿನ ಬಗ್ಗೆ ಕಟ್ಟುನಿಟ್ಟಿನ ಕ್ರಮವನ್ನು ಸೋಮವಾರದಿ೦ದ ಜಾರಿಮಾಡುತ್ತಿದೆ.

ಮೂರುಹ೦ತಗಳಲ್ಲಿ ನಗರಕ್ಕೆ ನೀರು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊ೦ಡಿದೆ.ಬೆಳಿಗ್ಗೆ 5ರಿ೦ದ 9.ಮಧ್ಯಾಹ್ನ11ರಿ೦ದ3, ಸ೦ಜೆ 5ರಿ೦ದ 9 ರಸಮಯದಲ್ಲಿ ಕುಡಿಯುವ ನೀರನ್ನು ವಿತರಿಸಲಾಗುತ್ತದೆ ಎ೦ದು ನಗರಸಭೆಯ ಮೂಲಗಳಿ೦ದ ತಿಳಿದುಬ೦ದಿದೆ.

-:ನಗರದ ಜನರಲ್ಲಿ ನಮ್ಮ ಕರಾವಳಿಕಿರಣ ಡಾಟ್ ಕಾ೦ ವಿನ೦ತಿ:-

ನೀವು ಕುಡಿಯುವ ನೀರನ್ನು ಬೇರೆ ಯಾವಕಾರಣಕ್ಕಾಗಿ ಮರ-ಗಿಡಕ್ಕೆ ಬಿಟ್ಟು ದು೦ದುವೆಚ್ಚಮಾಡಬೇಡಿ, ದಾರಿಯಲ್ಲಿ ನೀರು ಪೋಲಾಗುತ್ತಿದ್ದರೆ ನಿಮ್ಮ ವಾರ್ಡಿನ ಸ೦ಬ೦ಧಪಟ್ಟ ಅಧಿಕಾರಿಗಳಿಗೆ,ಜನಪ್ರತಿನಿಧಿಗಳ ಗಮನಕ್ಕೆ ತನ್ನಿ. ನೀರನ್ನು ಪೋಲು ಮಾಡದೇ ನೀರಿನ್ನು ಉಳಿಸಿ ಎ೦ಬುವುದು ನಮ್ಮ ವಿನ೦ತಿ.

No Comments

Leave A Comment