Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯೇ ಅಲ್ಲ: ಆರ್‌ಟಿಐಗೆ ಕ್ರೀಡಾ ಸಚಿವಾಲಯದ ಉತ್ತರ!

ಹೊಸದಿಲ್ಲಿ: ದೇಶದಲ್ಲಿ ಯಾವುದೇ ಕ್ರೀಡೆಯನ್ನು ರಾಷ್ಟ್ರೀಯ ಕ್ರೀಡೆ ಎಂದು ಘೋಷಿಸಿಲ್ಲ ಎಂದು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಅಚ್ಚರಿಯ ಹೇಳಿಕೆ ನೀಡಿದೆ.

ಮಹಾರಾಷ್ಟ್ರದ ಉತ್ತರ ಭಾಗದಲ್ಲಿರುವ ಧುಲೇ ಜಿಲ್ಲೆಯ ಶಾಲಾ ಶಿಕ್ಷಕರೊಬ್ಬರು ಸಲ್ಲಿಸಿದ್ದ  ಅರ್ಜಿಗೆ ಕ್ರೀಡಾ ಸಚಿವಾಲಯ ಉತ್ತರ ನೀಡಿದ್ದು, ದೇಶದಲ್ಲಿ ಯಾವುದೇ ಕ್ರೀಡೆಗೆ ರಾಷ್ಟ್ರೀಯ ಕ್ರೀಡೆಯಾಗಿ ಪರಿಗಣಿಸಿಲ್ಲ ಎಂದಿದೆ. ಅಂದಹಾಗೆ ಹಾಕಿ ಎಂದೆ ಹೆಚ್ಚು ಜನಪ್ರಿಯ. ಆದರೆ, ಆರ್‌ಟಿಐನಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ ಇದು ಸುಳ್ಳಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಧುಲೇ ಜಿಲ್ಲೆಯ ವಿ.ಕೆ ಪಾಟಿಲ್‌ ಅಂತಾರಾಷ್ಟ್ರೀಯ ಶಾಲೆಯ ಶಿಕ್ಷಕ ಮಯೂರೇಶ್‌ ಅಗರ್ವಾಲ್‌ ಈ ಆರ್‌ಟಿಐ ಸಲ್ಲಿಸಿದ್ದರು. ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಕಿಯನ್ನು ಭಾರತ ರಾಷ್ಟ್ರೀಯ ಕ್ರೀಡೆ ಎಂದು ಘೋಷಿಸಿದ್ದು ಯಾವಾಗ ಎಂದು ಪ್ರಶ್ನೆ ಕೇಳಿದ್ದ ಕಾರಣಕ್ಕೆ ಅಧಿಕೃತ ಮಾಹಿತಿ ಪಡೆಯುವ ಸಲುವಾಗಿ ಅಗರ್ವಾಲ್‌ ಆರ್‌ಟಿಐ ಮೊರೆಹೋಗಿದ್ದರು. ಇದಕ್ಕೆ 2020ರ ಜನವರಿ 15ರಂದು ಕ್ರೀಡಾ ಸಚಿವಾಲಯ ಮಯೂರ್‌ ಅವರಿಗೆ ಉತ್ತರ ಕಳುಹಿಸಿಕೊಟ್ಟಿದೆ.

ಎಲ್ಲರಿಗೂ ಹಿಂದಿ ಬರಬೇಕು, ಅದಕ್ಕಿಂತಲೂ ದೊಡ್ಡ ಭಾಷೆಯಿಲ್ಲ ಎಂದ ಬಿಸಿಸಿಐ ಕಾಂಮೆಂಟೇಟರ್‌!

“ದೇಶದಲ್ಲಿ ಯಾವುದೇ ಕ್ರೀಡೆಗೆ ರಾಷ್ಟ್ರೀಯ ಕ್ರೀಡೆಯ ಸ್ಥಾನ ಮಾನ ನೀಡಲಾಗಿಲ್ಲ. ಎಲ್ಲಾ ಕ್ರೀಡೆಗಳನ್ನು ಉತ್ತೇಜಿಸುವ ಮತ್ತು ಪ್ರೇರೇಪಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ,” ಎಂದು ಮಯೂರೇಶ್‌ ಅಗರ್ವಾಲ್‌ ಅವರ ಆರ್‌ಟಿಐ ಅರ್ಜಿಗೆ ಕ್ರೀಡಾ ಸಚಿವಾಲಯ ಉತ್ತರಿಸಿದೆ.

ಈ ಮಧ್ಯೆ ಭಾರತ ಪುರುಷರ ಹಾಕಿ ತಂಡದ ನಾಯಕ ಮನ್‌ದೀಪ್‌ ಸಿಂಗ್‌, ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್‌ಐಎಚ್‌) ನೀಡುವ ವಾರ್ಷಿಕ ಪ್ರಶಸ್ತಿಗಳ ಪೈಕಿ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಭಾರತದ ಮೊತ್ತ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಟೀಮ್‌ ಇಂಡಿಯಾ ಕಪ್ತಾನ 27 ವರ್ಷದ ಮನ್‌ದೀಪ್‌ ಪಾತ್ರರಾಗಿದ್ದಾರೆ.

ಬುಮ್ರಾ ಬೌಲಿಂಗ್‌ ವೈಫಲ್ಯಕ್ಕೆ ಕಾರಣ ವಿವರಿಸಿದ ಜಹೀರ್‌ ಖಾನ್‌

ಪ್ರಶಸ್ತಿ ರೇಸ್‌ನಲ್ಲಿದ್ದ ಬೆಲ್ಜಿಯಂನ ಆರ್ಥರ್‌ ವ್ಯಾನ್ ಡೊರೆನ್‌ (ದ್ವಿತೀಯ ಸ್ಥಾನ) ಮತ್ತು ಅರ್ಜೆಂಟೀನಾದ ಲೂಕಾಸ್‌ ವಿಲ್ಲಾ (3ನೇ ಸ್ಥಾನ) ಅವರಿಗೆ ಸಡ್ಡು ಹೊಡೆದು ಮನ್‌ದೀಪ್‌ ಈ ಗೌರವ ಸಂಪಾದಿಸಿದ್ದಾರೆ. ಪ್ರಶಸ್ತಿ ಸಲುವಾಗಿ ಮನ್‌ದೀಪ್‌ಗೆ ಶೇ. 35.2 ರಷ್ಟು ಮತಗಳು ಲಭ್ಯವಾಗಿದ್ದು, ವ್ಯಾನ್‌ ಡೊರೆನ್‌ ಮತ್ತು ಲೂಕಾಸ್‌ಗೆ ಕ್ರಮವಾಗಿ 19.7 ಮತ್ತು 16.5ರಷ್ಟು ಮತಗಳು ಸಿಕ್ಕಿವೆ.

No Comments

Leave A Comment