Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಬಸ್ ಗೆ ಢಿಕ್ಕಿ ಹೊಡೆದ ಟ್ರಕ್: ಭೀಕರ ಅಪಘಾತದಲ್ಲಿ 13 ಜನರು ದುರ್ಮರಣ, 31 ಮಂದಿ ಗಂಭೀರ

ಉತ್ತರಪ್ರದೇಶ: ಆಗ್ರಾ -ಲಕ್ನೋ ಹೆದ್ದಾರಿಯಲ್ಲಿ ಟ್ರಕ್ ಒಂದು ಬಸ್ ಗೆ ಢಿಕ್ಕಿ ಹೊಡೆದ ತೀವ್ರತೆಗೆ 13 ಜನರು ದಾರುಣವಾಗಿ ಸಾವನ್ನಪ್ಪಿ 31 ಜನರು ಗಂಭೀರ ಗಾಯಗೊಂಡ ಘಟನೆ ಫಿರೋಜಾಬಾದ್ ನಲ್ಲಿ ನಡೆದಿದೆ ಎಂದು  ಮಾಧ್ಯಮದ ವರದಿ ತಿಳಿಸಿದೆ.

ಗಾಯಗೊಂಡ ವ್ಯಕ್ತಿಗಳನ್ನು ಇತವಾಹಹ್ ನಲ್ಲಿರುವ ಸೈಫೈ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ರಾತ್ರಿ 10 ಗಂಟೆಯ ವೇಳೆ ಈ ಭೀಕರ ಅಪಘಾತ ಸಂಭವಿಸಿದ್ದು  ಸಾವೀನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ, ದೆಹಲಿಯಿಂದ ಮೊತಿರಿಗೆ (ಬಿಹಾರ) ಹೋಗುತ್ತಿದ್ದ ಸ್ಲೀಪರ್ ಬಸ್ ಗೆ ಹಿಂದಿನಿಂದ ಬಂದ ಕಂಟೇನರ್ ಟ್ರಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಎಂದು ಪೊಲೀಸ್ ವರಿಷ್ಠಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. ನಗ್ಲಾ ಖಂಗಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ಈ ಕುರಿತು ಮಾತನಾಡಿದ ಸೈಫೈ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ವೈಧ್ಯಾಧಿಕಾರಿ ಡಾ. ವಿಶ್ವ ದೀಪಕ್, 13 ಜನರು  ಸಾವನ್ನಪ್ಪಿದ್ದು 31 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.

ಬಸ್ ನಲ್ಲಿ 40 ರಿಂದ 45 ಪ್ರಯಾಣಿಕರು ಇದ್ದರು. ಆನೇಕರು ಇದರಲ್ಲಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

No Comments

Leave A Comment