Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ನೆಲಗಡಲೆ ಸಿಪ್ಪೆ, ಬಿಸ್ಕೆಟ್ ನಡುವೆ ವಿದೇಶಿ ನೋಟು ಕಳ್ಳಸಾಗಣೆ! ವ್ಯಕ್ತಿ ಬಂಧನ

ನವದೆಹಲಿ: ಸುಮಾರು 45 ಲಕ್ಷ ರೂಪಾಯಿ ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ವರದಿ ತಿಳಿಸಿದೆ.

ಮುರಾದ್ ಅಲಾಂ ಎಂಬ ವ್ಯಕ್ತಿ ನೆಲಗಡಲೆ ಸಿಪ್ಪೆ, ಬಿಸ್ಕೆಟ್ ಪ್ಯಾಕೇಟ್ ಹಾಗೂ ಇತರ ವಸ್ತುಗಳ ಒಳಗೆ ನೋಟುಗಳನ್ನು ತುಂಬಿಸಿ ಕಳ್ಳಸಾಗಣೆ ಮಾಡಲು ಯತ್ನಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿ ನೋಟುಗಳನ್ನು ಸಣ್ಣ ಸುರುಳಿ ಸುತ್ತಿ ನೆಲಗಡಲೆ ಸಿಪ್ಪೆಯೊಳಗೆ ತುಂಬಿಸಿರುವುದನ್ನು ಹೊರತೆಗೆಯುತ್ತಿರುವ ವೀಡಿಯೋವನ್ನು ಭದ್ರತಾ ಏಜೆನ್ಸಿ ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿದೆ.

No Comments

Leave A Comment