Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ಲಕ್ಷಾಂತರ ಮೌಲ್ಯದ ಅಕ್ರಮ ರಕ್ತ ಚಂದನ ವಶ: ನಕಲಿ ನಂಬರ್ ಪ್ಲೇಟ್ ಬಳಿಸಿ ದಂಧೆ

ಚಿಕ್ಕಬಳ್ಳಾಪುರ; ಪಕ್ಕದ ಆಂಧ್ರ ಪ್ರದೇಶದಿಂದ ಬೆಂಗಳೂರು‌ ಕಡೆಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಲಕ್ಷಾಂತರ ರೂ ಮೌಲ್ಯದ 500 ಕೆಜಿಯಷ್ಟು ರಕ್ತ ಚಂದನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ರಕ್ತ ಚಂದನವನ್ನು ಬಾಗಪೇಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಸ್ಕಾರ್ಪಿಯೋ ವಾಹನದಲ್ಲಿ ‌ಸಾಗಿಸುವ ವೇಳೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಅರ್ಸಲನ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ವಿಕ್ರಮ್ ಹಾಗೂ ತಂಡ ಕಾರ್ಯಾಚರಣೆ ನಡೆಸಿತು. ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ವಶಕ್ಕೆ ಪಡೆದಿದೆ.

ಆರೋಪಿಗಳು ಎಸ್ಕೇಪ್
ಖಚಿತ ಮಾಹಿತಿ ಪಡೆದಿದ್ದ ಇಲಾಖೆ ಅಧಿಕಾರಿಗಳು ಹೆದ್ದಾರಿಯಲ್ಲಿ ಹೊಂಚು ಹಾಕಿ ಕುಳಿತಿದ್ದರು. ಆದರೆ ದೂರದಲ್ಲಿಯೇ ಸಿಬ್ಬಂದಿಗಳನ್ನು ನೋಡಿದ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ನಕಲಿ ನಂಬರ್ ಪ್ಲೇಟ್ ಬಳಕೆ
ಆರೋಪಿಗಳು ರಕ್ತ ಚಂದನ ತುಂಡುಗಳನ್ನು ಸಾಗಿಸಲು ನಕಲಿ ನಂಬರ್ ಪ್ಲೇಟ್ ಗಳನ್ನು ಬಳಕೆ ಮಾಡುತ್ತಿದ್ದರು ಎಂಬ ಸಂಗತಿ ಅರಣ್ಯ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ‌ ಬೆಳಕಿಗೆ ಬಂದಿದೆ. ವಾಹನದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ನೋಂದಣಿಯ ನಂಬರ್ ಪ್ಲೇಟ್ ಗಳು ಪತ್ತೆಯಾಗಿವೆ ಎಂದು ಜಿಲ್ಲಾ ಅರಣ್ಯ ಸಂರಕ್ಷರಣಾಧಿಕಾರಿ ಅರ್ಸಲನ್ ತಿಳಿಸಿದರು.

No Comments

Leave A Comment