Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ಕೊರೊನಾ ವೈರಸ್ ಗೆ ಕೋವಿಡ್-19 ಎಂದು ಹೆಸರಿಟ್ಟ WHO: ಮೃತರ ಸಂಖ್ಯೆ 1,110ಕ್ಕೆ ಏರಿಕೆ

ವುಹಾನ್ : ಚೀನಾವನ್ನು ಅಕ್ಷರಶಃ ನಲುಗಿಸಿ ಮರಣ ಮೃದಂಗಕ್ಕೆ ಕಾರಣವಾಗಿರುವ ಕೊರೋನಾ ವೈರಸ್ ಗೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಎಂದು ಹೆಸರಿಟ್ಟಿದೆ. ಏತನ್ಮಧ್ಯೆ ಮಾರಾಣಾಂತಿಕ ವೈರಸ್ ಗೆ ಬಲಿಯಾದವರ ಸಂಖ್ಯೆ 1,110ಕ್ಕೆ ಏರಿದೆ.

ಕೋವಿಡ್ -19 ಎಂದರೆ ಸಿಓ-ಕೊರೊನಾ, ವಿ-ವೈರಸ್ ಹಾಗೂ ಡಿ-ಡಿಸೀಸ್ ಎಂಬರ್ಥವಿದೆ. ಇದು 2019 ಡಿಸೆಂಬರ್ 31 ರಂದು ಪತ್ತೆಯಾದ ಕಾರಣ 19 ಎಂದು ಸೇರಿಸಲಾಗಿದೆ.

ಈ ನಡುವೆ ಮಾರಕ ವೈರಸ್ ಗೆ ಮಂಗಳವಾರ ಒಂದೇ ದಿನ ಹುಬೈ ಪ್ರಾಂತ್ಯದಲ್ಲಿ 94 ಜನರು ಬಲಿಯಾಗಿದ್ದಾರೆ. ಮಾತ್ರವಲ್ಲದೆ ಹೊಸದಾಗಿ 1,638 ಜನರು ಸೋಂಕುವಿಗೆ ತುತ್ತಾಗಿದ್ದಾರೆ. ಹಾಗಾಗಿ ಸೋಂಕು ಧೃಢಪಟ್ಟವರ ಪ್ರಮಾಣ 44,200 ಜನರಿಗೆ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತಜ್ಞ ವೈದ್ಯರ ತಂಡವೊಂದು ಚೀನಾಕ್ಕೆ ಆಗಮಿಸಿದ್ದು ರೋಗ ನಿಯಂತ್ರಣಕ್ಕೆ ಸೂಕ್ತ ನೆರವು ನೀಡುತ್ತಿದೆ.

No Comments

Leave A Comment