Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಚಾಮರಾಜನಗರ: ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ತಂದೆ!

ಚಾಮರಾಜನಗರ: ತನ್ನ ಅಪ್ರಾಪ್ತ ಮಲ ಮಗಳ ಮೇಲೆ ತಂದೆಯೇ  ಅತ್ಯಾಚಾರ ಎಸಗಿರುವ‌ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಚಾಮರಾಜನಗರದ ಗಾಳಿಪುರ ಬಡಾವಣೆಯಲ್ಲಿ ಈ ಹೀನ ಕೃತ್ಯ ನಡೆದಿದ್ದು, ಆರೋಪಿ ತಂದೆ ಮಹಮ್ಮದ್ ಮುಸ್ತಾಫ (30)ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಮುಸ್ತಾಫಾಗೆ ಇಬ್ಬರು ಪತ್ನಿಯರಿದ್ದರು. ಎರಡನೇ ಹೆಂಡತಿ ಜ.31 ರಂದು ಕೆಲಸದ ನಿಮಿತ್ಯ ಬೆಂಗಳೂರಿಗೆ ತೆರಳಿದ್ದಾಗ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.ಎರಡನೇ ಪತ್ನಿ ತಾನು ಬೆಂಗಳುರಿಗೆ ತೆರಳುವ ಮುನ್ನ ಮೊದಲ ಪತ್ನಿಯ ಮನೆಯಲ್ಲಿ ತನ್ನ ಮಗಳನ್ನು ಬಿಟ್ಟು ಹೋಗಿದ್ದಳು. ಆ ವೇಳೆ ಕಾಮುಕ ತಂದೆ ತನ್ನದೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಇನ್ನು ಹೀನಕೃತ್ಯ ನಡೆಸಿದ ಪತಿಯ ವಿರುದ್ಧ ಪತ್ನಿಯೇ ಚಾಮರಾಜನಗರ ಪಟ್ಟಣದ ಠಾಣೆಯಲ್ಲಿ ದೂರು ನೀಡಿದ್ದಳು.ಇದೀಗ ಪೋಲೀಸರು ಆರೋಪಿಯನ್ನು ಪೊಕ್ಸೋ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.

No Comments

Leave A Comment