Log In
BREAKING NEWS >
ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ.....ಕೋವಿಡ್-19: ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಏಪ್ರಿಲ್ 14ರವರೆಗೆ ನಿಷೇಧ...

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಭೇಟಿ

ಸುರತ್ಕಲ್: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಇಲ್ಲಿನ ಸಮಸ್ಯೆಗಳ ಬಗ್ಗೆ ವೈದ್ಯಾಧಿಕಾರಿಗಳ ಬಳಿ ಚರ್ಚಿಸಿದರು.

ಸ್ಥಳಿಯ ಸಮಸ್ಯೆ, ವೈದ್ಯರ ಕೊರತೆ, ಮತ್ತು ಆಸ್ಪತ್ರೆಯಲ್ಲಿ ಆಗಬೇಕಾದ ಸೌಲಭ್ಯಗಳ ಪಟ್ಟಿಯನ್ನು ಲೋಕಾಯುಕ್ತರು ಪಡೆದುಕೊಂಡರು.

ಮರಣೋತ್ತರ ಪರೀಕ್ಷೆಗೆ ವೈದ್ಯರು ಅಸಹಕಾರ ಮಾಡುತ್ತಾರುಂಬು ಮಾತು ಕೇಳಿಬಂದುದಕ್ಕೆ ವೈದ್ಯರಿಗೆ ತರಾಟೆಗೆ ತೆಗೆದುಕೊಂಡರು. ಪೊಲೀಸರು ಯಾವಾಗ ಮರಣೋತ್ತರ ಪರೀಕ್ಷೆಗೆ ಮನವಿ ಮಾಡಿದರೂ ಅಗತ್ಯವಾಗಿ ಬರತಕ್ಕದ್ದು ಎಂದು ಸೂಚಿಸಿದರು.

ಇತ್ತೀಚೆಗಷ್ಟೇ ನೇಮಕವಾದ ಯುವ ವೈದ್ಯಾಧಿಕಾರಿಗಳಿಗೆ ನೀತಿ ಪಾಠ ಬೋಧಿಸಿದ ನ್ಯಾ. ವಿಶ್ವನಾಥ ಶೆಟ್ಟಿಯವರು, ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವಂತೆ ಸೂಚಿಸಿದರು. ಜನರು ನಂಬಿಕೆ ವಿಶ್ವಾಸದಿಂದ ಇಲ್ಲಿಗೆ ಬರುತ್ತಾರೆ. ಅದನ್ನು ಉಳಿಸಿಕೊಳ್ಳಬೇಕು ಎಂದರು.

No Comments

Leave A Comment