Log In
BREAKING NEWS >
ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ.....ಕೋವಿಡ್-19: ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಏಪ್ರಿಲ್ 14ರವರೆಗೆ ನಿಷೇಧ...

1.50 ಲಕ್ಷ ರೂ. ಮೌಲ್ಯದ ಚಿನ್ನ ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ

ಕಾರ್ಕಳ: ಮ್ಯಾಕ್ಸಿ ಕ್ಯಾಬ್‌ ನಲ್ಲಿ ಬಿಟ್ಟುಹೋದ ಸುಮಾರು 1.50 ಲಕ್ಷ ರೂ. ಮೌಲ್ಯದ ಬ್ರೇಸ್ಲೆಟ್‌ ಒಂದನ್ನು ಮ್ಯಾಕ್ಸಿ ಕ್ಯಾಬ್‌ ಚಾಲಕರೊಬ್ಬರು ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜೋಡುರಸ್ತೆ ನಿವಾಸಿ ಲಿಯೋ ಫೆರ್ನಾಂಡಿಸ್‌ ಅವರೇ ಪ್ರಾಮಾಣಿಕತೆ ಮೆರೆದ ಮ್ಯಾಕ್ಸಿ ಕ್ಯಾಬ್‌ ಚಾಲಕ. ಫೆ. 9ರಂದು ಸಂಜೆ ವೇಳೆ ಕಾರ್ಕಳ ನಕ್ರೆಯಿಂದ ಅಲಂಗಾರ್‌ ಗೆ ಮದುವೆ ದಿಬ್ಬಣ ಹೋಗಿ ವಾಪಸಾಗುವ ಸಂದರ್ಭ ನಕ್ರೆಯ ವಿಲ್ಸನ್‌ ಡಿಸೋಜ ಅವರು ಬ್ರೇಸ್ಲೆಟ್‌ ಕಳೆದುಕೊಂಡಿದ್ದರು.

ಮ್ಯಾಕ್ಸಿ ಕ್ಯಾಬ್‌ನಲ್ಲಿ ಪತ್ತೆ

ಫೆ. 10ರಂದು ಮ್ಯಾಕ್ಸಿ ಕ್ಯಾಬ್‌ ನಲ್ಲಿ ಚಿನ್ನದ ಆಭರಣವಿರುವುದನ್ನು ಕಂಡು ಚಾಲಕ ಲಿಯೋ ಫೆರ್ನಾಂಡಿಸ್‌ ಚಿನ್ನ ಕಳೆದುಕೊಂಡವರಿಗೆ ಮಾಹಿತಿ ನೀಡಿದರು. ವಿಲ್ಸನ್‌ ಅವರ ಅದೃಷ್ಟವೆಂಬಂತೆ ಫೆ. 9ರಂದು ಅದೇ ಬಾಡಿಗೆ ಕೊನೆಯದಾಗಿದ್ದ ಕಾರಣ ಬ್ರೆಸ್ಲೆಟ್‌ ಮ್ಯಾಕ್ಸಿ ಕ್ಯಾಬ್‌ನಲ್ಲೇ ಇತ್ತು. ಬಳಿಕ ಬ್ರೆಸ್ಲೆಟ್‌ ಅನ್ನು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ವಾರಿಸುದಾರರಿಗೆ ಹಸ್ತಾಂತರಿಸಿದರು.

ಕಾರ್ಕಳ ನಗರ ಠಾಣಾ ಎಸ್‌ಐ ಮಧು ಬಿ.ಇ. ಚಾಲಕನ ಪ್ರಾಮಾಣಿಕತೆ ಮೆಚ್ಚಿ ಅಭಿನಂದಿಸಿದರು. ಆಟೋರಿಕ್ಷಾ ಚಾಲಕರ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ  ಸಂತೋಷ್‌ ರಾವ್‌, ತಾಲೂಕು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ  ದೀಪಕ್‌ ಹೆಗಡೆ, ಕಾರ್ಯದರ್ಶಿ ಅಣ್ಣಿ ಮಡಿವಾಳ, ಟ್ಯಾಕ್ಸಿ ಚಾಲಕ ಗಣೇಶ್‌ ಮತ್ತಿತರರು ಈ ಸಂದರ್ಭದಲ್ಲಿದ್ದರು.

No Comments

Leave A Comment